Publish Date: Sat, 30 Sep 2023 (17:47 IST)
Updated Date: Sat, 30 Sep 2023 (18:54 IST)
ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ಅಲ್ಲಿನ ಗವರ್ನರ್ ಕಾಫಿ ಹ್ಯೂಚುಲ್ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ನಗರದ ಕೆಲವೆಡೆ ರಾತ್ರಿ ಭಾರೀ ಮಳೆಯಾಗಿದ್ದು, 13 ಸೆಂ.ಮೀ. ಮಳೆ ದಾಖಲಾಗಿದೆ. ಇನ್ನು, ಹಗಲಿನಲ್ಲಿಯೂ 18 ಸೆಂ.ಮೀ. ಮಳೆಯಾಗುವ ನಿರೀಕ್ಷೆಯಿದೆ ಎಂದು ಹ್ಯೂಚುಲ್ ಎಚ್ಚರಿಸಿದ್ದಾರೆ. ಆದರೆ, ಮಳೆ ಮತ್ತು ಪ್ರವಾಹದಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹ ಮತ್ತು ಮಳೆಯಿಂದಾಗಿ ಸಂಪೂರ್ಣ ನಗರ ಸ್ಥಗಿತಗೊಂಡಿದ್ದು ತುರ್ತು ಪರಿಸ್ಥಿರಿ ಹೇರಿರುವ ಕಾರಣ ಮನೆಯಿಂದ ಯಾರು ಹೊರ ಬರದಂತೆ ಎಚ್ಚರಿಕೆ ನೀಡಿದ್ದಾರೆ.