Publish Date: Wed, 27 Sep 2023 (14:40 IST)
Updated Date: Wed, 27 Sep 2023 (14:46 IST)
ಕೋಲಾರ ಸಂಸದ ಮುನಿಸ್ವಾಮಿ ಮೇಲೆ ಹಲ್ಲೆ ಹಿನ್ನೆಲೆ ಉಸ್ತುವಾರಿ ಸಚಿವ ಬೈರತಿ ಸುರೇಶ್, ಕೋಲಾರ ಶಾಸಕ ನಾರಾಯಣಸ್ವಾಮಿ, ಕೋಲಾರ ಎಸ್ಪಿ ವಿರುದ್ಧ ದೂರು ನೀಡಿದ್ದಾರೆ.ರಾಜ್ಯಪಾಲರಿಗೆ ಸಂಸದ ಮುನಿಸ್ವಾಮಿ ನಿಯೋಗ ,ವಿಧಾನಪರಿಷತ್ ಸದಸ್ಯರುಗಳಾದ ಛಲವಾದಿ ನಾರಾಯಣಸ್ವಾಮಿ, ಕೇಶವ್ ಪ್ರಸಾದ್ ಸೇರಿದಂತೆ 30 ಜನರ ನಿಯೋಗ ತೆರಳಿ ದೂರು ನೀಡಿದ್ದಾರೆ.ಸಂಸದರಾಗಿ ಜನಪ್ರತಿನಿಧಿ ಮೇಲೆ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ.ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ನಿಯೋಗ ಆಗ್ರಹಿಸಿದೆ.