Select Your Language

Notifications

webdunia
webdunia
webdunia
webdunia

ಕಣ್ಣೀರಿನಲ್ಲಿ ಕುಟುಂಬ, ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

Divine neglect of family and policy officials in tears
bangalore , ಶುಕ್ರವಾರ, 24 ಸೆಪ್ಟಂಬರ್ 2021 (21:28 IST)
ಬೆಂಗಳೂರು: ತಮ್ಮದಲ್ಲದ ತಪ್ಪಿನಿಂದ ಮಳೆಯ ಕಾರಣದಿಂದ  ಏಕಕಾಎಕಿ ಮರದ ಕೊಂಬೆ ಬಿದ್ದು ಸಿದ್ದಪ್ಪ (49) ಎನ್ನುವವವರು ಸಾವನ್ನಪ್ಪಿ ಇದೇ  ಸೆಪ್ಟೆಂಬರ್ 30 ಕ್ಕೆ ಒಂದು ವರ್ಷ ತುಂಬುತ್ತದೆ. ಚಾಲನೆ ಮಾಡುತಿದ್ದ ಬೈಕ್ ಕೂಡ ಜಖಂಗೊಂಡಿತ್ತು ಪರಿಹಾರ ನೀಡಬೇಕಾದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಬೇಜವಾಬ್ದಾರಿತನದಿಂದ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ 
 
ಕಳೆದ  ವರ್ಷ ಸೆಪ್ಟೆಂಬರ್ 30 ರಂದು ಸಿದ್ದಪ್ಪ ಬೈಕ್ ನಲ್ಲಿ ತಮ್ಮ ಕೆಲ್ಸದ ನಿಮಿತ್ತ  ಹೋಗುವಾಗ ರಾಜಧಾನಿಯ  ತಿಲಕ್ ನಗರದಲ್ಲಿ  ಮೇಲೆ ಮರ ಬಿದ್ದಿತ್ತು. ಕೂಡಲೇ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ 18 ದಿನಗಳ ಸಾವು ಬದುಕಿನ ಹೊರಟಾದ ನಂತರ ಮೃತಪಟ್ಟಿದ್ದರು.
 
ಬಿಬಿಎಂಪಿ ಒಣಗಿದ ಮತ್ತು ಶಿಥಿಲಗೊಂಡಿರುವ ಮರಗಳನ್ನು ನಿರ್ವಹಣೆ ಮಾಡದಿರುವ ಕಾರಣ, ಮರದ ಕೊಂಬೆ ಸಿದ್ದಪ್ಪ ಅವರ  ಬಿದ್ದು ಸಾವನ್ನಪ್ಪಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದರು.  ಈ ದುರ್ಘಟನೆ ನಡೆದು ಒಂದು ವರ್ಷ ಕಳೆದರೂ ಪಾಲಿಕೆಯಿಂದ ಸೂಕ್ತ ಪರಿಹಾರ ಧನ ಸಿಗದೆ ಮೃತ ಸಿದ್ದಪ್ಪನ ಪತ್ನಿ ಗೀತಾ ಮತ್ತು  ಮಗಳು ನಂದಿತ ದೊರೆತಿಲ್ಲ.  
 
ಬಿಬಿಎಂಪಿಯ ಅಧಿಕಾರಿಗಳ ಮೊರೆ ಹೋದರು ಪ್ರಯೋಜನವಾಗಿಲ್ಲ. ಸಿದ್ದಪ್ಪ ಮೃತಪಟ್ಟ ಎರಡು ತಿಂಗಳಲ್ಲೇ ಕುಟುಂಬಕ್ಕೆ ಮತ್ತೊಂದು ಅಘಾತ ಬಂದೊದಗಿ ಪತ್ನಿ ಗೀತಾಗೆ ಕ್ಯಾನ್ಸರ್ ಕಾಣಿಸಿಕೊಂಡು ಜೀವನ ಕೂಡ ದುಸ್ತರವಾಗಿದೆ. 
 
ಪತ್ನಿಗೆ ಕ್ಯಾನ್ಸರ್ ಮೂರನೇ ಸ್ಟೇಜ್: 
 
ನನಗೆ ಕ್ಯಾನ್ಸರ್ ಮೂರನೇ ಸ್ಟೇಜ್ ನಲ್ಲಿದೆ. ಪ್ರಾಯಕ್ಕೆ ಬಂದಿರೋ ನನ್ನ ಮಗುಳಿಗೆ ಯಾರೂ ದಿಕ್ಕಿಲ್ಲ. ಏನಾದರೂ ಪರಿಹಾರ ಧನ, ಕೆಲಸ ಕೊಡಿಸುವಂತೆ ಪಾಲಿಕೆ ಅಧಿಕಾರಿಗಳಲ್ಲಿ ಕೇಳುತ್ತಿದ್ದೇನೆ. ಆದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಮೃತ ಸಿದ್ದಪ್ಪನ ಪತ್ನಿ ಗೀತಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. 
 
 
ಪರಿಹಾರ ನೀಡದಿದ್ದರೆ ಕಾನೂನು ಹೋರಾಟ: 
 
ಬಿಬಿಎಂಪಿ ವತಿಯಿಂದ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಇಲ್ಲದಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು. ಪ್ರಾರಂಭದಲ್ಲಿ ಸ್ವಲ್ಪ ಆಸ್ಪತ್ರೆ ಖರ್ಚಿಗೆ ಸಾರ್ವಜನಿಕರು, ಕೆಲ ಪಕ್ಷದ ಕಾರ್ಯಕರ್ತರು ಕೇಳಿಕೊಂಡಾಗ ಸಹಾಯ ಮಾಡಿದ ಪಾಲಿಕೆ ನಂತರ ಯಾವುದೇ ಪರಿಹಾರ ನೀಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ದೂರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಆಪ್ ನಿಂದ ಕ್ಯಾಂಡಲ್ ಲೈಟ್ ಪ್ರೊಟೆಸ್ಟ್