Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಇನ್ನು ಹಿಂದೇಟು

No more hesitation to shut down roadblocks in Silicon City
bangalore , ಶನಿವಾರ, 18 ಸೆಪ್ಟಂಬರ್ 2021 (20:34 IST)
ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಇನ್ನು ಹಿಂದೆಟು ಹಾಕುತ್ತಿರುವ ಬಿಬಿಎಂಪಿ. ಕಳೆದ ಒಂದು ತಿಂಗಳಲ್ಲಿ ಇಬ್ಬರು ವಾಹನ ಸವಾರರು ಬಿದ್ದು ಮೃತಪಟ್ಟರು ಹಾಗೂ ವಾಹನ ಸವಾರರು ಬಿದ್ದು ಗಾಯಗೊಳ್ಳುವ ಸಂಖ್ಯೆ ಹೆಚ್ಚಾದರೂ ಇನ್ನು ಎಚ್ಚೆತ್ತುಕೊಳ್ಳದೆ ನಗರದ ಹಲವಾರು ಕಡೆ ಇನ್ನು ಗುಂಡಿಗಳನ್ನು ಮುಚ್ಚದೆ ತೆರೆದೆ ಇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಿವಾಜಿನಗರದಲ್ಲಿ ಇನ್ನು ಹಲವಾರು ಕಡೆ ಗುಂಡಿಗಳನ್ನು ಮುಚ್ಚದೆ ತೆರೆದೆ ಇದ್ದು ವಾಹನ ಸವಾರರು ಈ ರಸ್ತೆ ಗುಂಡಿಗಳಿಂದ ಪರದಾಡುವಂತಾಗಿದೆ. ರಾತ್ರಿ ಸಮಯದಲ್ಲಿ ಸ್ವಲ್ಪ ಯಾಮಾರಿದರೂ ಯಮಲೋಕ  ಸೇರುವಂತಾಗಿದೆ ಸವಾರರ ಪರಿಸ್ಥಿತಿ. ಇನ್ನಾದರೂ ಬಿಬಿಎಂಪಿ ಎಚ್ಚೆತ್ತುಕೊಂಡು  ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕಾರ್ಯ ಮಾಡುತ್ತದೆಯೋ ನೋಡಬೇಕಾಗಿದೆ.ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಇನ್ನು ಹಿಂದೇಟು

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ಸುರಂಗ ವಾರದಲ್ಲಿ ಪೂರ್ಣ