ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಅಂತ್ರವಾಗಿದ್ದು ಪಾಲಿಕೆ ಗದ್ದುಗೆ ಏರೋದಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅನಿವಾರ್ಯವಾಗಿದೆ..ಪರಿಸ್ಥಿತಿಯ ಲಾಭ ಪಡೆಯೋದಕ್ಕೆ ಮುಂದಾಗಿದೆ.ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕಲಬುರಗಿ ಪಕ್ಷೇತರ ಕಾರ್ಪೋರೇಟರ್ ಶಂಭುಲಿಂಗಪಾಟೀಲ್ ಬಳಬಟ್ಟಿ ನಿರ್ಮಲ್‌ಕುಮಾರ್ ಸುರಾನಾ ಮೂಲಕ ಬಿಜೆಪಿಗೆ ಸೆರ್ಪಡೆಯಾಗಿದ್ದಾರೆ.23 ಸ್ಥಾನದಿಂದ 24ಸ್ಥಾನಕ್ಕೆ ಬಂದ ಬಿಜೆಪಿ ಕಲಬುರಗಿ ಮೇಯರ್ ಪಟ್ಟಕ್ಕಾಗಿ ಕಸರತ್ತು ನಡೆಸಿದೆ.ಇನ್ನು ಸಭೆಯಲ್ಲಿ ಮಾತಡಿದ ದತ್ತಾತ್ರೇಯ ಪಾಟೀಲ್ ಕಲಬುರ್ಗಿ ಪಾಲಿಕೆಗೆ ಮೇಯರ್ ಬಿಜೆಪಿಯವರೇ ಆಗುತ್ತಾರೆ.ಈಗಾಗಲೇ ಜೆಡಿಎಸ್ ಜೊತೆ ನಮ್ಮ ನಾಯಕರು ಮಾತನಾಡಿದ್ದಾರೆ. ನಮ್ಮ ಮುಂದೆ ಜೆಡಿಎಸ್ ಯಾವುದೇ ಬೇಡಿಕೆ ಇಟ್ಟಿಲ್ಲ. ಮೇಯರ್ ಹುದ್ದೆ ಜೆಡಿಎಸ್ ಕೇಳಿಲ್ಲ, ನಮ್ಮ ನಾಯಕರು ಕುಮಾರಸ್ವಾಮಿ ಜೊತೆ ಮಾತುಕತೆ ಮಾಡಿದ್ದಾರೆ. ಕಲಬುರಗಿಯಲ್ಲಿ ಇಷ್ಟು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈಗ ಕಾಂಗ್ರೆಸ್ ನ್ನು ಬೇರು ಸಹಿತ ಕಿತ್ತು ಹಾಕ್ತೇವೆ...ಬಿಜೆಪಿ ಮೇಯರ್ ಆಗುವುದಂತೂ ನಿಶ್ವಿತ ಎಂದಿದ್ದಾರೆ.