Publish Date: Thu, 26 Oct 2023 (16:20 IST)
Updated Date: Thu, 26 Oct 2023 (17:39 IST)
ಹುಲಿ ಉಗುರು ಒಳಗೊಂಡ ಆಭರಣ ವಿಷಯ ಮತ್ತಷ್ಟು ಸೆಲೆಬ್ರಿಟಿಗಳಿಗೆ ಕಂಟಕ ತಂದೊಡ್ಡಿದೆ. ಚಲನಚಿತ್ರ ನಟರು, ಧಾರ್ಮಿಕ ಮುಖಂಡರ ವಿರುದ್ಧ ಬುಧವಾರ ಅರಣ್ಯ ಇಲಾಖೆಯಲ್ಲಿ ಸಾಲು ಸಾಲು ದೂರುಗಳು ದಾಖಲಾದ ಹಿಂದೆಯೇ ಅರಣ್ಯಾಧಿಕಾರಿಗಳ ತಂಡಗಳು ರಾಜ್ಯದ ವಿವಿಧೆಡೆ ತಪಾಸಣೆ ನಡೆಸಿವೆ. ಹಲವರಿಗೆ ನೋಟಿಸ್ ಜಾರಿ ಮಾಡಿದ್ದಲ್ಲದೇ ಅವರ ಬಳಿ ಇದ್ದ ಹುಲಿ ಉಗುರನ್ನು ವಶಕ್ಕೆ ಪಡೆದು ಪರಿಶೀಲಿಸಲು ಮುಂದಾಗಿವೆ.