ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹುಲಿ ಉಗುರಿನ ಲಾಕೆಟ್ ಭಾರೀ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರಿನ ಲಾಕೆಟ್ ಧರಿಸಿದ್ದಕ್ಕೆ ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಆಗಿದ್ದರು.
ಇದರ ಬೆನ್ನಲ್ಲೇ ಸ್ಯಾಂಡಲ್ ವುಡ್ ಕಲಾವಿದರಾದ ದರ್ಶನ್, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಮುಂತಾದವರ ವಿರುದ್ಧವೂ ದೂರು ದಾಖಲಾಗಿತ್ತು. ಇವರ ಮನೆಯಲ್ಲೂ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಅಷ್ಟಕ್ಕೂ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಹುಲಿ ಉಗುರಿನ ಲಾಕೆಟ್ ಧರಿಸುವುದು ಯಾಕೆ ಗೊತ್ತಾ?
ಹಿಂದಿನ ಕಾಲದಲ್ಲಿ ಬೇಟೆಯಾಡಲು ಯಾವುದೇ ನಿರ್ಬಂಧವಿರಲಿಲ್ಲ. ರಾಜರ ಕಾಲದಲ್ಲಿ ಹುಲಿ, ಸಿಂಹಗಳನ್ನು ಭೇಟೆಯಾಗಿ ಅವುಗಳ ಉಗುರನ್ನೇ ಹಾರದಲ್ಲಿ ಪೋಣಿಸಿ ಧರಿಸುವುದು ವೀರತ್ವದ ಸಂಕೇತ ಎಂದು ನಂಬಲಾಗಿತ್ತು. ಇಂದೂ ಕೂಡಾ ಅದೇ ನಂಬಿಕೆ ಮುಂದುವರಿದಿದೆ.
ಆದರೆ ಈಗ ವನ್ಯ ಜೀವಿಗಳನ್ನು ಬೇಟೆಯಾಡಲು ಅವಕಾಶವಿಲ್ಲ. ಆದರೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಹುಲಿ ಉಗುರಿನ ಲಾಕೆಟ್ ಧರಿಸುವುದರಿಂದ ತಾವು ಪವರ್ ಫುಲ್ ಆಗಿರಬಹುದು, ಅಧಿಕಾರ, ಯಶಸ್ಸು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಹುಲಿ ಉಗುರಿನ ಲಾಕೆಟ್ ಧರಿಸುತ್ತಾರೆ. ಆದರೆ ಇಂದಿನ ಕಾನೂನಿನಂತೆ ಹುಲಿಯ ನೈಜ ಉಗುರನ್ನು ಈ ರೀತಿ ಲಾಕೆಟ್ ಮಾಡಿ ಧರಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ.