ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ, ಸಚಿವೆ ಶೋಭಾ ಕರಂದ್ಲಾಜೆ ಹೆಸರು ಬಲವಾಗಿ ಕೇಳಿಬರುತ್ತಿದೆ.
ಹಾಲಿ ಅಧ‍್ಯಕ್ಷ ನಳೀನ್ ಕುಮಾರ್ ಕಟೀಲ್ ಅಧಿಕಾರಾವಧಿ ಎಂದೋ ಮುಗಿದಿದೆ. ಆದರೆ ಇದುವರೆಗೆ ಹೊಸ ಅಧ್ಯಕ್ಷರ ನೇಮಕವಾಗಿಲ್ಲ. ಹೀಗಾಗಿ ಅವರ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಹೆಸರು ಕೇಳಿಬರುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿಯಲ್ಲಿ ಮಹಿಳೆಯೊಬ್ಬರು ಸಾರಥಿಯಾಗಲಿದ್ದಾರೆ.
ಶೋಭಾ ಉತ್ತರ ಪ್ರದೇಶ ಚುನಾವಣೆಯಲ್ಲಿ ತೋರಿದ ಕ್ರಿಯಾಶೀಲತೆ ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯಕ್ಕೆ ರಾಜ್ಯ ಬಿಜೆಪಿ ಹಲವು ಬಣಗಳಾಗಿದ್ದು ಎಲ್ಲರನ್ನೂ ಒಂದುಗೂಡಿಸಲು ಮಹಿಳೆಯೊಬ್ಬರನ್ನು ನಾಯಕ ಸ್ಥಾನದಲ್ಲಿ ಕೂರಿಸುವ ತಂತ್ರಕ್ಕೆ ವರಿಷ್ಠರು ಮೊರೆ ಹೋಗಲಿದ್ದಾರೆ.