Select Your Language

Notifications

webdunia
webdunia
webdunia
webdunia

ಹುಲಿ ಉಗುರಿನ ಲಾಕೆಟ್ ಪ್ರಕರಣ: ದರ್ಶನ್ ಮನೆಯಲ್ಲಿ ತಲಾಷ್, ಜಗ್ಗೇಶ್ ವಿರುದ್ಧವೂ ದೂರು

ದರ್ಶನ್
ಬೆಂಗಳೂರು , ಬುಧವಾರ, 25 ಅಕ್ಟೋಬರ್ 2023 (19:06 IST)
ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರಿಗೆ ಹುಲಿ ಉಗುರಿನ ಲಾಕೆಟ್ ಧಾರಣೆ ಈಗ ಕುತ್ತಿಗೆಗೆ ಬಂದಿದೆ. ವರ್ತೂರು ಸಂತೋಷ್ ಅರೆಸ್ಟ್ ಆದ ಬೆನ್ನಲ್ಲೇ ಹಲವು ಸ್ಯಾಂಡಲ್ ವುಡ್ ತಾರೆಯರ ವಿರುದ್ಧ ಹುಲಿ ಉಗುರಿನ ಲಾಕೆಟ್ ಧರಿಸಿದ ಆರೋಪ ಕೇಳಿಬಂದಿತ್ತು.

ಮುಖ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧವೂ ದೂರು ದಾಖಲಾಗಿತ್ತು. ಅದರಂತೆ ಈಗ ದರ್ಶನ್ ಮನೆಯಲ್ಲಿ ಅರಣ‍್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದರ್ಶನ್ ಕುತ್ತಿಗೆಯಲ್ಲಿರುವ ಸರದಲ್ಲಿರುವ ಲಾಕೆಟ್ ನಿಜವಾಗಿಯೂ ಹುಲಿ ಉಗುರೇ ಅಥವಾ ನಕಲಿಯೇ ಎಂದು ತಿಳಿದುಬರಬೇಕಿದೆ.

ಇನ್ನು, ಜಗ್ಗೇಶ್ ಕೂಡಾ ಸಂದರ್ಶನವೊಂದಲ್ಲಿ ತಮಗೆ ತಾಯಿಯಿಂದ ಹುಲಿ ಉಗುರಿನ ಲಾಕೆಟ್ ಗಿಫ್ಟ್ ಆಗಿ ಸಿಕ್ಕ ಬಗ್ಗೆ ಹೇಳಿದ್ದು ವೈರಲ್ ಆಗಿತ್ತು. ಈ ಬಗ್ಗೆ ಅವರ ವಿರುದ್ಧ ದೂರು ದಾಖಲಾಗಿದೆ. ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ತಮ್ಮ ಕುತ್ತಿಗೆಯಲ್ಲಿರುವ ಹುಲಿ ಉಗುರಿನ ಲಾಕೆಟ್ ನಕಲಿ ಎಂದು ಸ್ಪಷ್ಟನೆ ನೀಡಿದ್ದಾರೆ.  ಈಗಾಗಲೇ ಹುಲಿ ಉಗುರಿನ ಲಾಕೆಟ್ ಧರಿಸಿರುವ ಸೆಲೆಬ್ರಿಟಿಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ಎಲ್ಲರೂ ವಿಚಾರಣೆಗೊಳಪಡಲಿದ್ದಾರೆ.

ಸೆಲೆಬ್ರಿಟಿಗಳು ಮಾತ್ರವಲ್ಲದೇ ಕೆಲವು ರಾಜಕಾರಣಿಗಳೂ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವುದು ಬೆಳಕಿಗೆ ಬಂದಿದೆ. ಈಗ ಎಲ್ಲರಿಗೂ ವಿಚಾರಣೆಯ ಉರುಳು ಬೀಳುವುದು ಗ್ಯಾರಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಹೆಸರಿನಲ್ಲಿ ಐ ಬ್ಯಾಂಕ್ ತೆರೆಯಲು ರಾಜ್ಯ ಸರ್ಕಾರ ಸಿದ್ಧತೆ