Publish Date: Sat, 23 Feb 2019 (15:49 IST)
Updated Date: Sat, 23 Feb 2019 (15:53 IST)
ಗ್ರಾಮ ಪಂಚಾಯ್ತಿಯ ವಿಶೇಷ ಸಾಮಾನ್ಯ ಸಭೆ ನಡೆಯುತ್ತಿರುವಾಗಲೇ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಸಭೆಯಿಂದ ಎದ್ದು ಓಡಿ ಹೋಗಿರುವ ಪ್ರಸಂಗ ನಡೆದಿದೆ.
ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮ ಪಂಚಾಯ್ತಿಯ ವಿಶೇಷ ಸಾಮಾನ್ಯ ಸಭೆಯಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಎಲ್.ಚಂದ್ರನಾಯ್ಕ ಪರಾರಿಯಾದ ಘಟನೆ ನಡೆದಿದೆ.
ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು 23 ಸದಸ್ಯರ ಪೈಕಿ ವಿಶೇಷವಾಗಿ 18 ಜನ ಮಹಿಳಾ ಸದಸ್ಯರಿದ್ದು, 5 ಜನ ಪುರುಷ ಸದಸ್ಯರಿದ್ದಾರೆ. ಪಂಚಾಯ್ತಿ ಅಧ್ಯಕ್ಷೆ ಎಲ್.ಸಾವಿತ್ರಿ ಶಶಿಕುಮಾರ್ ನಾಯ್ಕರವರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆಗೆ ಸರ್ವ ಸದಸ್ಯರು ನಿಗದಿತ ಸಮಯಕ್ಕೆ ಸರಿಯಾಗಿ ಆಗಮಿಸಿದ್ದು, ಸಭೆ ಪ್ರಾರಂಭ ಮಾಡವ ಮೊದಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಲ್.ಚಂದ್ರನಾಯ್ಕ ಪಂಚಾಯ್ತಿಗೆ ಬಂದು ಸದಸ್ಯರ ಹಾಜರಿ ಪುಸ್ತಕ ಮತ್ತು ನಡಾವಳಿಕೆ ಪುಸ್ತಕ ಹಾಗೂ ಸಂಬಂದಪಟ್ಟ ದಾಖಲಾತಿಗಳನ್ನು ತೆಗೆದುಕೊಂಡರು.
ಆ ಬಳಿಕ ಸಭೆಯ ಬಗ್ಗೆ ಅಧ್ಯಕ್ಷರಿಗಾಗಲಿ, ಉಪಾಧ್ಯಾಕ್ಷರಿಗಾಗಲಿ ಪಂಚಾಯ್ತಿಯ ಯಾವೊಬ್ಬ ಸದಸ್ಯರ ಗಮನಕ್ಕೆ ಯಾವುದೇ ಮಾಹಿತಿ ನೀಡದೆ ವಿಶೇಷ ಸಭೆಯನ್ನು ತಿರಸ್ಕಾರ ಮಾಡಿ ಸಭೆಯಿಂದ ಓಡಿ ಹೋಗಿದ್ದಾರೆ.