Select Your Language

Notifications

webdunia
webdunia
webdunia
webdunia

ಟೈಮ್ ಸೆನ್ಸ್ ಇಲ್ಲದ ಅಧಿಕಾರಿಗಳಿಗೆ ಡಿಸಿ ಮಾಡಿದ್ದೇನು?

ಡಿಸಿ
ಟೈಮ್ ಸೆನ್ಸ್ ಇಲ್ಲದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಯೊಬ್ಬರು ಖಡಕ್ ತಾಕೀತು ಮಾಡಿದ ಘಟನೆ ನಡೆದಿದೆ.

ಮಾದರಿ ನೀತಿ‌ ಸಂಹಿತೆ ತರಬೇತಿ ಕಾರ್ಯಾಗಾರಕ್ಕೆ ಸಮಯಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗರಂ ಆದ ಡಿಸಿ ಅಭಿರಾಮ್ ಜಿ ಶಂಕರ್, ತರಬೇತಿಗೆ ತಡವಾಗಿ ಬಂದ ಅಧಿಕಾರಿಗಳಿಗೆ ಗೇಟ್ ಔಟ್ ಎಂದಿದ್ದಾರೆ.

ಯಾರಿಗೂ ಮಾಹಿತಿ ಕೊಟ್ಟಿಲ್ವ? ಯಾಕೆ ಇಷ್ಟು ತಡವಾಗಿ ಅಧಿಕಾರಿಗಳು ಬರುತ್ತಿದ್ದಾರೆ. ತಡವಾಗಿ ಬಂದವರನ್ನ ಒಳಗೆ ಬಿಡಬೇಡಿ‌. ಬಾಗಿಲು ಹಾಕಿ ಎಂದು ಡಿಸಿ ತಾಕೀತು ಮಾಡಿದರು. ಸೆನೆಟ್ ಭವನದಲ್ಲಿ ಆಯೋಜನೆ ಗೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಈ ಘಟನೆ ನಡೆದಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ತರಬೇತಿ ನೀಡಲು ಆಯೋಜನೆ ಮಾಡಿದ ಕಾರ್ಯಾಗಾರದಲ್ಲಿ ಮೊದಲ ದಿನದ  ಕಾರ್ಯಾಗಾರಕ್ಕೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಡಿಸಿ ಅಸಮಧಾನ ವ್ಯಕ್ತಪಡಿಸಿದರು.

ನನಗೆ ಮೊದಲ ದಿನದ ತರಬೇತಿಯಲ್ಲೆ ತುಂಬಾ ನೋವಾಗಿದೆ. ಮುಂದಿನ ದಿನಗಳಲ್ಲಿ ಈ  ರೀತಿ ಆಗಬಾರದು ಎಂದು
ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸತೀಶ್ ಜಾರಕಿಹೊಳಿ ನಮ್ಮ ಸಿಎಂ ಎಂದವರಾರು?