Publish Date: Fri, 22 Feb 2019 (14:54 IST)
Updated Date: Fri, 22 Feb 2019 (14:56 IST)
ಮುಂಬರುವ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಏತನ್ಮಧ್ಯೆ ಕ್ಷೇತ್ರವಾರು ಅಭ್ಯರ್ಥಿಗಳ ಸಭೆಯನ್ನು ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು ಕರೆದಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ 2 ದಿನಗಳ ಸಭೆಯನ್ನು ಹೆಚ್.ಡಿ.ದೇವೇಗೌಡರು ಕರೆದಿದ್ದಾರೆ. ಇಂದು ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರದ ಪ್ರಮುಖರ ಸಭೆ ನಡೆಯಲಿದೆ. ಅದರಂತೆ ಫೆ.24 ರಂದು ಉತ್ತರ ಕನ್ನಡ, ಶಿವಮೊಗ್ಗ, ವಿಜಯಪುರ, ರಾಯಚೂರು, ಚಿಕ್ಕಮಗಳೂರು, ಚಾಮರಾಜನಗರ ಕ್ಷೇತ್ರಗಳ ಸಭೆ ನಡೆಯಲಿವೆ.
ಲೋಕಸಭೆಯಲ್ಲೂ ಮೈತ್ರಿ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆ ತಯಾರಿಯನ್ನ ಹೇಗೆ ನಡೆಸಬೇಕು? ತಳಮಟ್ಟದ ಕಾರ್ತಕರ್ತರನ್ನ ಸೆಳೆಯುವುದು ಹೇಗೆ? ಪ್ರಚಾರದ ವೈಖರಿ ಹೇಗಿರ್ಬೇಕು? ಕ್ಷೇತ್ರದಲ್ಲಿ ತಮ್ಮ ಶಕ್ತಿ ಎಷ್ಟಿದೆ ಎಂಬ ಕುರಿತು ಚರ್ಚೆ ನಡೆಸಲಾಗುತ್ತದೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.