Publish Date: Fri, 25 Oct 2019 (18:09 IST)
Updated Date: Fri, 25 Oct 2019 (18:12 IST)
ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಖದೀಮರನ್ನು ಬಂಧನ ಮಾಡಿರೋ ಘಟನೆ ನಡೆದಿದೆ.
ಬೆಂಗಳೂರಿನ ಶಿವಾಜಿ ನಗರ ಹಾಗೂ ಕೆಂಗೇರಿ ಸೇರಿದಂತೆ ಇತರೆಡೆ ಸಕ್ರಿಯರಾಗಿದ್ದ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ 7 ಜನರನ್ನು ಪೊಲೀಸರು ಬಂಧನ ಮಾಡಿದ್ದು, ಬಂಧಿತರಿಂದ 950 ಸಿಲಿಂಡರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
20 ರೀ ಫಿಲ್ಲಿಂಗ್ ಯಂತ್ರಗಳು, ಒಂದು ಟೆಂಪೋ, 12 ತೂಕ ಮಾಡುವ ಯಂತ್ರಗಳನ್ನು ವಶಕ್ಕೆ ಪೊಲೀಸರು ಪಡೆದುಕೊಂಡಿದ್ದಾರೆ.
ಅಸ್ಲಂ ಮಹ್ಮದ್, ನೌಷಾದ್, ಬಂದೇಲಿ ನವಾಜ್, ಸಾದತ್, ಗುಲ್ಲಾ ಮೊಹ್ಮದ್, ಮಹ್ಮದ್ ಖಾನ್, ಚಂದ್ರು ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.