Publish Date: Thu, 05 Sep 2019 (16:22 IST)
Updated Date: Thu, 05 Sep 2019 (16:24 IST)
ಗಣೇಶೋತ್ಸವ ಸಮಾರಂಭದಲ್ಲಿ ಹಿಂದೂ ಸಂಘಟನೆ ಕಾರ್ಯದರ್ಶಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಕೊಲೆಗಡುಕರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಮಂಗಳೂರಿನ ಪುತ್ತೂರಿನ ಹಿಂದೂ ಜಾಗರಣಾ ವೇದಿಕೆ ಕಾರ್ಯದರ್ಶಿಯ ಕೊಲೆ ಕೇಸ್ ನಲ್ಲಿ ಭಾಗಿಯಾದ ನಾಲ್ವರು ಹಂತಕರನ್ನ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನ ಆರ್ಯಾಪು ನಿವಾಸಿಗಳಾದ ಚರಣ್, ಕಿರಣ್, ಪ್ರೀತೇಶ್, ಸ್ಟೀವನ್ ಬಂಧಿತರು.
ಕಾರ್ತಿಕ್ ಮೇರ್ಲ ನನ್ನ ಈ ಆರೋಪಿಗಳು ಗಣೇಶೋತ್ಸವ ಸಮಾರಂಭದಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದರು.