Publish Date: Fri, 25 Oct 2019 (17:58 IST)
Updated Date: Fri, 25 Oct 2019 (18:01 IST)
ಟಿಪ್ಪು ಜಯಂತಿಯನ್ನು ಆಚರಿಸಿಯೇ ಸಿದ್ಧ ಎಂದಿದ್ದ ಬಚ್ಚೇಗೌಡರ ಪುತ್ರನಿಗೆ ಡಿಸಿಎಂ ಶಾಕ್ ನೀಡಿದ್ದಾರೆ.
ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಇಲ್ಲವೇ ನಾಯಕರು ಯಾರೊಬ್ಬರೂ ಟಿಪ್ಪು ಸುಲ್ತಾನ್ ಜಯಂತ್ಯುತ್ಸವವನ್ನು ಆಚರಣೆ ಮಾಡೋದಿಲ್ಲ. ಹಾಗೊಂದು ವೇಳೆ ಆಚರಣೆ ಮಾಡಿದರೆ ಅವರು ನಮ್ಮ ಬಿಜೆಪಿ ಪಕ್ಷದವರು ಆಗಿರಲ್ಲ ಅಂತ ಹೇಳಿದ್ದಾರೆ.
ಡಿಸಿಎಂ ಅಶ್ವತ್ಥ ನಾರಾಯಣ ಈ ಹೇಳಿಕೆ ನೀಡೋ ಮೂಲಕ ಪರೋಕ್ಷವಾಗಿ ಶರತ್ ಬಚ್ಚೇಗೌಡಗೆ ಟಾಂಗ್ ನೀಡಿದ್ದಾರೆ.
ಉಡುಪಿಗೆ ಭೇಟಿ ನೀಡಿದ್ದ ಡಿಸಿಎಂ ಶ್ರೀಕೃಷ್ಣನ ದರ್ಶನ ಪಡೆದುಕೊಂಡ ಬಳಿಕ ಈ ಹೇಳಿಕೆ ನೀಡಿದ್ದಾರೆ.