Publish Date: Fri, 25 Oct 2019 (10:43 IST)
Updated Date: Fri, 25 Oct 2019 (10:45 IST)
ಬೆಳಗಾವಿ : ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕ್ಷಣದವರೆಗೂ ಅನರ್ಹರಿಗೂ ಬಿಜೆಪಿಗೂ ಸಂಬಂಧವಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಅನರ್ಹ ಶಾಸಕರ ಬಗ್ಗೆ ನಾವು ಚಿಂತಿಸುವ ಅವಶ್ಯಕತೆ ಇಲ್ಲ. ಅನರ್ಹರು ನಮ್ಮ ಪಕ್ಷಕ್ಕೆ ಬರುವ ಕುರಿತು ಎಲ್ಲೂ ಹೇಳಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸ್ಪೀಕರ್ ಅನರ್ಹಗೊಳಿಸಿದ್ದಕ್ಕೆ ಕೋರ್ಟ್ ಗೆ ಹೋಗಿದ್ದಾರೆ. ತಮಗೆ ನ್ಯಾಯಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ನವರೂ ತಮಗೆ ನ್ಯಾಯಬೇಕೆಂದು ಹೋಗಿದ್ದಾರೆ. ಇದು ಅನರ್ಹ ಶಾಸಕರು, ಕಾಂಗ್ರೆಸ್ ನಡುವಿನ ಗಲಾಟೆ. ಈ ಬಗ್ಗೆ ನಾವು ಮಾತಾಡೋದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.