ದಾವಣಗೆರೆ: ಇಲ್ಲಿನ ಕುಂಡುವಾಡ ಕೆರೆಯಲ್ಲಿ ನಾಪಾತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹ ಇಂದು ಪತ್ತೆಯಾಗಿದೆ. ಮೃತರನ್ನು ಶಾಂತಿನಗರದ ನಿವಾಸಿಗಳಾದ ಮನು (19) ಹಾಗೂ ಚೇತನ್ (22) ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆಯಿಂದ ಮನು ಹಾಗೂ ಚೇತನ್ ನಾಪತ್ತೆಯಾಗಿದ್ದರು. ಪೋಷಕರು ಹಾಗೂ ಸಂಬಂಧಿಕರು ಯುವಕರಿಗಾಗಿ ಹುಡುಕಾಟ ನಡೆಸಿದ್ದರು. ಸೋಮವಾರ ಸಂಜೆ ಕುಂದುವಾಡ ಕೆರೆಯ ದಡದ ಬಳಿ ಯುವಕರ ಬಟ್ಟೆ, ಮೊಬೈಲ್ ಹಾಗೂ ಬೈಕ್ ಪತ್ತೆಯಾಗಿತ್ತು.
ಮುಳುಗುತಜ್ಞರ ಸಹಾಯದಿಂದ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಇಬ್ಬರ ಮೃತದೇಹ ಪತ್ತೆಯಾಗಿದ್ದು ವಿದ್ಯಾನಗರ ಠಾಣೆಯಲ್ಲಿ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ.
ಇನ್ನೂ ಇಬ್ಬರು ಯುವಕರು ಮೀನಿನ ಆಸೆಗೆ ಇದೀಗ ಜೀವ ಕಳೆದುಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಟೆಂಡರ್ ಪಡೆದವರು ನಿತ್ಯವೂ ಮೀನು ಹಿಡಿಯಲು ರಾತ್ರಿ ಬಲೆ ಹಾಕುತ್ತಾರೆ. ಯುವಕರು ಅನಧಿಕೃತವಾಗಿ ಮೀನು ಹಿಡಿಯಲು ಕೆರೆಗೆ ಇಳಿದಾಗ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.