Select Your Language

Notifications

webdunia
webdunia
webdunia
webdunia

ನಾಲ್ಕನೇ ಮಗುವು ಹೆಣ್ಣಾಗಿದ್ದಕ್ಕೆ 3 ದಿನದ ಹಸುಗೂಸು ಕೊಂದ ತಾಯಿ

Ramadurga Taluk Crime Case

Sampriya

ಬೆಳಗಾವಿ , ಮಂಗಳವಾರ, 25 ನವೆಂಬರ್ 2025 (17:40 IST)
ಬೆಳಗಾವಿ: ನಾಲ್ಕನೇ ಮಗುವು ಹೆಣ್ಣೆ ಜನಿಸಿದ್ದಕ್ಕೆ  ಮೂರು ದಿನದ ಹಸುಗೂಸನ್ನು ತಾಯಿಯೇ ಕ್ರೂರವಾಗಿ ಕೊಲೆ ಮಾಡಿದ ಘಟನೆ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ನಡೆದಿದೆ. 

ಅಶ್ವಿನಿ ಹಳಕಟ್ಟಿ ಕೊಲೆ ಮಾಡಿದ ಮಗುವಿನ ತಾಯಿ. ಸ್ಥಳಕ್ಕೆ ರಾಮದುರ್ಗ ಡಿವೈಎಸ್​ಪಿ ಚಿದಂಬರ ಮಡಿವಾಳರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸುರೇಬಾನ ಪೊಲೀಸ್ ಠಾಣೆಯಲ್ಲಿ ತಾಯಿ ವಿರುದ್ಧ ಕೊಲೆ ಕೇಸ್ ದಾಖಲಾಗಿದ್ದು, ಬಂಧಿಸಿದ್ದಾರೆ.

ಅಶ್ವಿನಿ ಅವರಿಗೆ ಈಗಾಗಲೇ ಮೂರು ಹೆಣ್ಣು ಮಕ್ಕಳಾಗಿದ್ದು, ನಾಲ್ಕನೆಯದ್ದು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ನ.23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.

ಜನ್ಮ ನೀಡಿದ ಮಾರನೇ ದಿನ ಅಶ್ವಿನಿ ತವರುಮನೆ ಹಿರೇಮುಲಂಗಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ತಾಯಿ ಹೊರ ಹೋದಾಗ ಹಸುಗೂಸಿನ ಕತ್ತು ಹಿಸುಕಿ ಅಶ್ವಿನಿ ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಗು ಉಸಿರಾಡುತ್ತಿಲ್ಲ ಅಂತಾ ನಾಟಕವಾಡಿದ್ದಾರೆ. 



Share this Story:

Follow Webdunia kannada

ಮುಂದಿನ ಸುದ್ದಿ

ಶತಮಾನಗಳಷ್ಟು ಹಳೆಯ ಗಾಯ ವಾಸಿಯಾಗುತ್ತಿದೆ: ನರೇಂದ್ರ ಮೋದಿ