Select Your Language

Notifications

webdunia
webdunia
webdunia
webdunia

ದಾವಣಗೆರೆಯಲ್ಲಿ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಬಿಗ್ ಟ್ವಿಸ್ಟ್

Congress
ದಾವಣಗೆರೆ: ಕರ್ನಾಟಕದ ದಾವಣಗೆರೆ ಉಪಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಹಿನ್ನಡೆಯಾಗಿದ್ದು ಬಿಗ್ ಟ್ವಿಸ್ಟ್ ಸಿಕ್ಕಿದೆ.


ದಾವಣಗೆರೆಯಲ್ಲಿ ಆರಂಭಿಕ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶ್ಯಾಮನೂರು ಕೆಲವೇ ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದರು. ಇಲ್ಲಿ ಮುಸ್ಲಿಂ ಮತದಾರರ ಅಸಮಾಧಾನದ ಹೊರತಾಗಿಯೂ ಸಮರ್ಥ್ ಮುನ್ನಡೆಯಲ್ಲಿದ್ದಿದ್ದು ಕಾಂಗ್ರೆಸ್ ಗೆ ಪ್ಲಸ್ ಪಾಯಿಂಟ್ ಆಗಿತ್ತು.

ಆದರೆ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಹಿಂದಿಕ್ಕಿದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಮುನ್ನಡೆಯಲ್ಲಿದ್ದಾರೆ. ಇದು ಕಾಂಗ್ರೆಸ್ ಗೆ ಬಿಗ್ ಶಾಕ್ ಆಗಿದೆ. ಇಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದರು.

ಆದರೆ ಬಾಗಲಕೋಟೆಯಲ್ಲಿ ಮೇಟಿ ಕುಟುಂಬವನ್ನು ಮತದಾರರು ಕೈ ಬಿಡುವಂತೆ ತೋರುತ್ತಿಲ್ಲ. ಇಲ್ಲಿ ಉಮೇಶ್ ಮೇಟಿ ಸದ್ಯಕ್ಕೆ ಮುನ್ನಡೆ ಕಾಯ್ದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Tamil Nadu election result: ತಮಿಳುನಾಡಿನಲ್ಲಿ ಸಿಎಂ ಎಂಕೆ ಸ್ಟಾಲಿನ್ ಗೆ ಬಿಗ್ ಶಾಕ್ ನೀಡಿದ ಮತದಾರರ: ಆಗಿದ್ದೇನು