Select Your Language

Notifications

webdunia
webdunia
webdunia
webdunia

Tamil Nadu election result: ತಮಿಳುನಾಡಿನಲ್ಲಿ ಸಿಎಂ ಎಂಕೆ ಸ್ಟಾಲಿನ್ ಗೆ ಬಿಗ್ ಶಾಕ್ ನೀಡಿದ ಮತದಾರರ: ಆಗಿದ್ದೇನು

Tamil Nadu election result live 2026
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಮುಂದುವರಿದಿದ್ದು ಸಿಎಂ ಎಂಕೆ ಸ್ಟಾಲಿನ್ ಗೇ ಮತದಾರರು ಬಿಗ್ ಶಾಕ್ ನೀಡಿದ್ದಾರೆ.

ತಮಿಳುನಾಡಿನಲ್ಲಿ ಸದ್ಯದ ಟ್ರೆಂಡ್ ಪ್ರಕಾರ ಡಿಎಂಕೆ 50 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇಲ್ಲಿ ಚುನಾವಣಾ ಸಮೀಕ್ಷೆಯಲ್ಲೂ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಮುನ್ಸೂಚನೆ ನೀಡಿದ್ದವು.

ಅದರಂತೆಯೇ ಸದ್ಯದ ಟ್ರೆಂಡ್ ಪ್ರಕಾರ ಎಐಡಿಎಂಕೆ 25 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಸದ್ಯದ ಟ್ರೆಂಡ್ ಪ್ರಕಾರ ಇಲ್ಲಿ ಟಿವಿಕೆ ಪಕ್ಷ ಪ್ರಮುಖ ಪೈಪೋಟಿ ನೀಡುತ್ತಿದೆ. ಒಟ್ಟು 40 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ದಳಪತಿ ವಿಜಯ್ ಕೂಡಾ ಪೆರಂಬೂರು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

ಶಾಕಿಂಗ್ ವಿಚಾರವೆಂದರೆ ಡಿಎಂಕೆ ಮುನ್ನಡೆಯಲ್ಲಿದ್ದರೂ ಇಲ್ಲಿ ಸಿಎಂ ಎಂಕೆ ಸ್ಟಾಲಿನ್ ಹಿನ್ನಡೆಯಲ್ಲಿದ್ದಾರೆ. ಕೊಳತ್ತೂರು ಕ್ಷೇತ್ರದಲ್ಲಿ ಎಂಕೆ ಸ್ಟಾಲಿನ್ ಹಿನ್ನಡೆಯಲ್ಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

West Bengal election result: ಪಶ್ಚಿಮ ಬಂಗಾಲದಲ್ಲಿ ಬಿಜೆಪಿ, ಟಿಎಂಸಿ ರೇಸ್ ನಲ್ಲಿ ಯಾರಿಗೆ ಮುನ್ನಡೆ