Publish Date: Mon, 04 May 2026 (08:59 IST)
Updated Date: Mon, 04 May 2026 (09:03 IST)
ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ರೇಸ್ ನಲ್ಲಿ ಯಾರಿಗೆ ಮುನ್ನಡೆ? ಸದ್ಯದ ಟ್ರೆಂಡ್ ಹೇಗಿದೆ ಇಲ್ಲಿದೆ ವಿವರ.
ಪಶ್ಚಿಮ ಬಂಗಾಲದಲ್ಲಿ ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ ಮುನ್ನಡೆಯಲ್ಲಿದೆ. ಆದರೆ ಟಿಎಂಸಿ ಕೂಡಾ ಪ್ರಬಲ ಪೈಪೋಟಿ ನೀಡುತ್ತಿದೆ. ಇಲ್ಲಿ ಬಿಜೆಪಿ 91 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ ಟಿಎಂಸಿ 90 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಇಲ್ಲಿ ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಇನ್ನೂ ಖಾತೆ ತೆರೆದಿಲ್ಲ. ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿಯ ಸುವೇಂದು ಅಧಿಕಾರಿ ಮುನ್ನಡೆಯಲ್ಲಿದ್ದಾರೆ. ಇಲ್ಲಿನ ಜಿದ್ದಾಜಿದ್ದಿ ಹೇಗಿದೆ ಎನ್ನುವುದು ಆರಂಭಿಕ ಟ್ರೆಂಡ್ ನಲ್ಲಿ ತಿಳಿದುಬರುತ್ತಿದೆ. ಸದ್ಯದ ಟ್ರೆಂಡ್ ಗಮನಿಸುತ್ತಿದ್ದರೆ ಇತರರು ಪ್ರಮುಖ ಪಾತ್ರ ನಿಭಾಯಿಸುವ ಸಾಧ್ಯತೆಯಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ