Select Your Language

Notifications

webdunia
webdunia
webdunia
webdunia

ಕರ್ನಾಟಕ ಉಪಚುನಾವಣೆ: ಬಾಗಲಕೋಟೆ, ದಾವಣಗೆರೆಯಲ್ಲಿ ಯಾರಿಗೆ ಮುನ್ನಡೆ

BJP-Congress
ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆ ಜೊತೆ ಬಾಗಲಕೋಟೆ, ದಾವಣಗೆರೆಯಲ್ಲೂ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಇಲ್ಲಿ ಯಾರಿಗೆ ಮುನ್ನಡೆ ಇಲ್ಲಿದೆ ವಿವರ.

ಕರ್ನಾಟಕದ ಉಪಚುನಾವಣೆಗಳ ಪೈಕಿ ದಾವಣಗೆರೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮುಸ್ಲಿಂ ಮತದಾರರ ಅಸಮಮಾಧಾನಕ್ಕೆ ಗುರಿಯಾಗಿತ್ತು. ತಮ್ಮ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂದು ಮುಸ್ಲಿಂ ಸಮುದಾಯ ಅಸಮಾಧಾನಕ್ಕೀಡಾಗಿತ್ತು. ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸದ್ಯದ ಟ್ರೆಂಡ್ ಪ್ರಕಾರ ಇಲ್ಲಿ ಕಾಂಗ್ರೆಸ್ ನ ಸಮರ್ಥ್ ಸುಮಾರು 8 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.

ಇನ್ನು, ಬಾಗಲಕೋಟೆಯಲ್ಲೂ ಬಿಜೆಪಿ ಹಿನ್ನಡೆಯಲ್ಲಿದೆ. ಇಲ್ಲಿ ಕಾಂಗ್ರೆಸ್ ನ ಉಮೇಶ್ ಮೇಟಿ ಸದ್ಯಕ್ಕೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎಚ್ ವೈ ಮೇಟಿ ಕುಟುಂಬಕ್ಕೇ ಮತ್ತೆ ಮತದಾರ ಮಣೆ ಹಾಕುವ ಲಕ್ಷಣ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Tamil Nadu election result live: ತಮಿಳುನಾಡಿನಲ್ಲಿ ದಳಪತಿ ವಿಜಯ್ ಕತೆ ಏನಾಗಿದೆ