Publish Date: Fri, 03 Apr 2026 (17:23 IST)
Updated Date: Fri, 03 Apr 2026 (17:24 IST)
ಬೆಳಗಾವಿ: ಮುಸ್ಲಿಂ ಮತಗಳು ಬೇಡ ಎನ್ನುವ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಳ ಅವರು ಹುಚ್ಚ ಎಂದು ಕಾಂಗ್ರೆಸ್ ಶಾಸಕ ರಾಜು ಸೇಠ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳಗೆ ಒಳ್ಳೆಯ ಬುದ್ಧಿ ಇದೆ. ನೆನಪಿನ ಶಕ್ತಿ ಚೆನ್ನಾಗಿದೆ. ಅವರು ಸದನದಲ್ಲಿ ಉತ್ತಮವಾಗಿ ಮಾತನಾಡುವುದನ್ನು ನಾವು ನೋಡಿದ್ದೇವೆ. ಆದರೆ ಅವರ ಕೆಲ ಮಾತುಗಳಿಂದಲೇ ನಾವು ದೇಶ ಮತ್ತು ರಾಜ್ಯವನ್ನು ಹಾಳು ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಶಾಸಕ ರಾಜು ಸೇಠ ಹೇಳಿದರು.
ನಮಗೆ ಮುಸ್ಲಿಂ ಮತಗಳು ಬೇಡ ಎನ್ನುವವರು ಹುಚ್ಚರು. ನಮಗೆ ಇದು ಬೇಡ, ಅವರು ಬೇಡ ಎಂದು ಹೇಳುತ್ತಲೇ ನಾವು ದೇಶ ಮತ್ತು ರಾಜ್ಯವನ್ನು ಹಾಳು ಮಾಡುತ್ತಿದ್ದೇವೆ. ಎಲ್ಲರಿಗೂ ಎಲ್ಲ ಸಮುದಾಯದ ಜನರು ಬೇಕು ಎಂದು ಶಾಸಕ ರಾಜು ಸೇಠ ತಿರುಗೇಟು ನೀಡಿದ್ದಾರೆ.
ಇನ್ನೂ ನಡೆಯಲಿರುವ ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕರ್ತರು ಸಹ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸೇಠ್ ಹೇಳಿದರು.