ಬೆಂಗಳೂರು: ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯಗೆ ಬರಬೇಡ ಅಂದಿದ್ದೆ ಬಿಎಸ್ ಯಡಿಯೂರಪ್ಪನವರು ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಗಂದೂರು ಸೇತುವೆಯಲ್ಲಿ ಶಿಷ್ಟಾಚಾರ ಪಾಲನೆ ಅನ್ನೋದು ಒಂದು ನೆಪ ಅಷ್ಟೇ. ಈ ವಿಚಾರವಾಗಿ ಯಡಿಯೂರಪ್ಪ – ಸಿಎಂ ಸಿದ್ದರಾಮಯ್ಯ ಮಧ್ಯೆ ಅಡ್ಜಸ್ಟ್‌ಮೆಂಟ್ ಆಗಿತ್ತು. ಸಿಎಂಗೆ ನೀವೂ ಬರಬೇಡಿ, ನಿಮ್ಮವರೂ ಬರೋದು ಬೇಡ ಎಂದಿದ್ದರು. ಈ ಮೂಲಕ ತಮ್ಮ ಹಾಗೂ ಸಿದ್ದರಾಮಯ್ಯ ನಡುವೆ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಇಲ್ಲ ಅಂತ ತೋರಿಸಿಕೊಳ್ಳೋದು ಯಡಿಯೂರಪ್ಪ ಉದ್ದೇಶ ಎಂದರು.
ಅಡ್ಜಸ್ಟ್‌ಮೆಂಟ್ ಇಲ್ಲ ಅಂತ ತೋರಿಸಿಕೊಂಡು ತಮ್ಮ ಮಗ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯಲಿ ಎಂಬುದು ಅವರ ಉದ್ದೇಶ. ಈ ಅಪ್ಪ-ಮಗನಿಗೂ ಸಿದ್ದರಾಮಯ್ಯಗೂ ಹೊಂದಾಣಿಕೆ ಇದೆ.
ರಾಜ್ಯಾಧ್ಯಕ್ಷ ಆಗಿಯೂ ವಿಜಯೇಂದ್ರ ಮುಂದುವರಿತಾರೆ. ಅಮೇರಿಕ ಅಧ್ಯಕ್ಷರಾಗಿಯೂ ವಿಜಯೇಂದ್ರ ಅವರೇ ಮುಂದುವರಿತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.