Publish Date: Sat, 11 Apr 2026 (16:42 IST)
Updated Date: Sat, 11 Apr 2026 (16:46 IST)
ದಾವಣಗೆರೆ: ಇಲ್ಲಿನ ದಕ್ಷಿಣ ಉಪಚಚುನಾವಣೆ ಮುಗಿಯುತ್ತಿದ್ದ ಹಾಗೇ ಕಾಂಗ್ರೆಸ್‌ನನೊಳಗಿನ ಬಂಡಾಯದ ವಿಚಾರ ಮತ್ತೇ ಭುಗಿಲೆದ್ದಿದೆ. ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಮುನಿಸು ಇದೀಗ ಅಲ್ಪಸಂಖ್ಯಾರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್‌ಸಿಯೂ ಆಗಿರುವ ಅಬ್ದುಲ್ ಜಬ್ಬಾರ್ ರಾಜೀನಾಮೆ ಸಲ್ಲಿಸಿದ್ದಾರೆ.
ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದ ಸಚಿವ ಜಮೀರ್ ಅಹ್ಮದ್ ವಿರುದ್ಧ ಮತ್ತೊಂದು ಮುಸ್ಲಿಂ ಬಣ ತಿರುಗಿ ಬಿದ್ದಿತ್ತು.
ಜಮೀರ್ ಅಹ್ಮದ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ, ಪ್ರಚಾರಕ್ಕೆ ಅಂತ ಬಂದಿದ್ರೂ ಅವರ ನಡೆ ಯಾರಿಗೂ ಸಮಾಧಾನ ತಂದಿಲ್ಲ. ಇನ್ನೂ ಮುಸ್ಲಿಂ ನಾಯಕರನ್ನು ಮನವೊಲಿಕೆ ಮಾಡದೇ ಜಮೀರ್ ನಿರ್ಲಕ್ಷ್ಯ ವಹಿಸಿದ್ದರು ಎಂದು ಗಂಭೀರ ಆರೋಪ ಕೇಳಬಂದಿತ್ತು.
ಇನ್ನೂ ಜಮೀರ್ ಜೊತೆಗೆ ಎಂಎಲ್‌ಸಿ ಹಾಗೂ ಆಕಾಂಕ್ಷಿ ಅಬ್ದುಲ್ ಜಬ್ಬಾರ್ ಸಹ ಪ್ರಚಾರದಿಂದ ದೂರ ಉಳಿದಿದ್ರು. ಇನ್ನೂ ಪ್ರಚಾರ ಕೈಗೊಳ್ಳದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಕೂಗು ಬೆನ್ನಲ್ಳೇ ಜಬ್ಬಾರ್ ರಾಜೀನಾಮೆ ನೀಡಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ.