Select Your Language

Notifications

webdunia
webdunia
webdunia
webdunia

ತಮಿಳುನಾಡು, ಪಶ್ಚಿಮ ಬಂಗಾಲದಲ್ಲಿ ಮೊದಲ ಹಂತದ ಮತದಾನ ಶುರು

Voting
ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಲದಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಶುರುವಾಗಿದೆ. ಬೆಳಿಗ್ಗೆಯೇ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕುಟುಂಬ ಸಮೇತ ಬಂದು ಮತ ಚಲಾಯಿಸಿದ್ದಾರೆ.

ತಮಿಳುನಾಡಿನಲ್ಲಿ 234 ಸ್ಥಾನಗಳಿಗೆ ವೋಟಿಂಗ್ ಆರಂಭವಾಗಿದೆ. ಈ ಬಾರಿ ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆಗೆ ಪ್ರತಿಸ್ಪರ್ಧಿಯಾಗಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವಿದೆ. ಹೀಗಾಗಿ ತಮಿಳುನಾಡಿನ ಫಲಿತಾಂಶ ಏನಾಗಲಿದೆ ಎಂಬ ಕುತೂಹಲವಿದೆ.

ಬೆಳ್ಳಂ ಬೆಳಿಗ್ಗೆಯೇ ಚೆನ್ನೈನ ಎಸ್ಐಇಟಿ ಕಾಲೇಜಿಗೆ ಪುತ್ರ ದಯಾನಿಧಿ ಮಾರನ್ ಮತ್ತು ಇತರೆ ಕುಟುಂಬ ಸದಸ್ಯರ ಜೊತೆ ಬಂದ ಸಿಎಂ ಎಂಕೆ ಸ್ಟಾಲಿನ್ ಮತ ಚಲಾಯಿಸಿದ್ದಾರೆ. ಬಳಿಕ ಅಭಿವೃದ್ಧಿಗಾಗಿ ವೋಟ್ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಇತ್ತ ಪಶ್ಚಿಮ ಬಂಗಾಲದಲ್ಲೂ ಮೊದಲ ಹಂತದ ಚುನಾವಣೆ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ, ಎಯುಜೆಪಿ ಪಕ್ಷದ ಸಂಸ್ಥಾಪಕ ಹುಮಾಯೂನ್ ಕಬೀರ್ ಸೇರಿದಂತೆ ಪ್ರಮುಖರು ಬೆಳಿಗ್ಗೆಯೇ ಮತ ಚಲಾಯಿಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಕಠಿಣ ಪೈಪೋಟಿಯಿದೆ. ಈ ಬಾರಿ ಚುನಾವಣಾ ಆಯೋಗ ಮತಪರಿಷ್ಕರಣೆ ಮಾಡಿರುವುದರಿಂದ ಮತದಾನದ ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಜನರಿಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ರಣ ಬಿಸಿಲು