ಬರ್ತ್ ಡೇಗೆ ಕೇಕ್ ಬೇಡ ಧವಸ, ಧಾನ್ಯ ಕೊಡಿ: ಡಿ ಬಾಸ್ ದರ್ಶನ್ ಅಭಿಮಾನಿ

ಸೋಮವಾರ, 20 ಜನವರಿ 2020 (10:11 IST)
ಬೆಂಗಳೂರು: ಕಳೆದ ವರ್ಷ ಸರಳ ಹುಟ್ಟುಹಬ್ಬ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಈ ಬಾರಿಯೂ ಅದೇ ರೀತಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ದರ್ಶನ್ ಅಭಿಮಾನಿಗಳು ಕರೆ ನೀಡಿದ್ದಾರೆ.


ಬರ್ತ್ ಡೇಗೆ ಕೇಕ್, ಹಾರ ತಂದು ದುಡ್ಡು ದಂಡ ಮಾಡುವ ಬದಲು ದವಸ, ಧಾನ್ಯ ತನ್ನಿ. ಇದನ್ನು ಬಡವರಿಗೆ, ಅಗತ್ಯವಿದ್ದವರಿಗೆ ಹಂಚುವ ಕೆಲಸ ಮಾಡೋಣ ಎಂದಿದ್ದಾರೆ.

‘ಬರ್ತ್ ಡೇಗೆ ಹಾರ, ಕೇಕ್ ಏನೂ ತರಬೇಡಿ. ಅದರ ಬದಲು ನಿಮ್ಮ ಕೈಲಾಗುವಷ್ಟು ಅಕ್ಕಿ, ಸಕ್ಕರೆ, ಬೇಳೆ ಮುಂತಾದ ಅಗತ್ಯ ವಸ್ತುಗಳನ್ನು ತನ್ನಿ. ಇದನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ನಮ್ಮದು’ ಎಂದು ದರ್ಶನ್ ಮನವಿ ಮಾಡಿದ್ದಾರೆ. ಕಳೆದ ವರ್ಷವೂ ದರ್ಶನ್ ಇದೇ ರೀತಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವರ್ಷವೂ ಅದನ್ನೇ ಮಾಡಿ ನಿಜವಾದ ಹೀರೋ ಎನಿಸಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜಗತ್ ಪ್ರಕಾಶ್ ನಡ್ಡಾ