Publish Date: Tue, 19 Mar 2019 (11:27 IST)
Updated Date: Tue, 19 Mar 2019 (11:29 IST)
ಸುಮಲತಾ ಬೆನ್ನಿಗೆ ಸ್ಟಾರ್ ನಟರು ನಿಂತ ಹಿನ್ನೆಲೆಯಲ್ಲಿ ನಟರ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸ್ಟಾರ್ ನಟರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಫೇಸ್‌ಬುಕ್ ವಾರ್ ಶುರುಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಟರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾರ್ಯಕರ್ತರು, ಯಾರೇ ಬಂದರೂ ನಾವು ಮರುಳಾಗೋಲ್ಲ. ಪೂರ್ತಿ ಸಿನಿಮಾ ಇಂಡಸ್ಟ್ರಿ ಬಂದ್ರೂ ಗೆಲ್ಲೋದೆ ನಿಖಿಲ್. ಕಾವೇರಿ ಗಲಾಟೆ ಟೈಮಲ್ಲಿ ಮಲಗಿದ್ದ ನಟರನ್ನ ಮಂಡ್ಯ ರಾಜಕೀಯಕ್ಕೆ ಎದ್ದುಬರುವಂತೆ ಮಾಡಿದವರಿಗೆ ಧನ್ಯವಾದ ಅಂತೆಲ್ಲ ಪೋಸ್ಟ್ ಹರಿಬಿಡಲಾಗಿದೆ.
ರಾಜಾಹುಲಿ ಬಂದರೂ ಅಷ್ಟೇ, ಐರಾವತ ಬಂದರೂ ಅಷ್ಟೇ. ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್ ಕುಮಾರಸ್ವಾಮಿ. ಹೀಗಂತ ನಟ ದರ್ಶನ್, ಯಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್ ಕಾರ್ಯಕರ್ತರು ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ.