Publish Date: Tue, 19 Mar 2019 (11:04 IST)
Updated Date: Tue, 19 Mar 2019 (11:07 IST)
ಅಂಬರೀಷ್ ಅವರ ಕುಟುಂಬಕ್ಕಾಗಿ ಇದು ನನ್ನ ನಾಲ್ಕನೆಯ ಚುನಾವಣಾ ಪ್ರಚಾರ. ಯಾರ ಮೇಲೆಯೂ ಅಧಿಕಾರ ಚಲಾಯಿಸುವ ಯೋಗ್ಯತೆ ನಮಗಿಲ್ಲ. ಅಂಬರೀಷ್ ಮನೆಯ ಮಗನಾಗಿ ಮಾತ್ರ ನಾನು ಸುಮಲತಾ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ನಟ ದರ್ಶನ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶ್ ಮತ್ತು ತಾವು ಜೋಡಿ ಎತ್ತುಗಳಾಗಿ ಸುಮಲತಾ ಪರಪ್ರಚಾರ ಮಾಡುತ್ತೇವೆ. ಸಂಪೂರ್ಣವಾಗಿ ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಸುದೀಪ್ ಅವರ ಬೆಂಬಲ ಅದು ಅವರ ವೈಯಕ್ತಿಕ ವಿಚಾರ. ಒಂದೇ ಕ್ಷೇತ್ರದಲ್ಲಿ ಇಬ್ಬಿಬ್ಬರ ಪರ ಪ್ರಚಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಿಖಿಲ್ ಪರ ಪ್ರಚಾರ ಮಾಡುವುದಿಲ್ಲ.
ಈ ಹಿಂದೆ ಅಂಬರೀಷ್ ಅವರ ಸೂಚನೆ ಮೇರೆಗೆ ಬೇರೆಯವರ ಬಗ್ಗೆಯೂ ಹಲವಾರು ಬಾರಿ ಪ್ರಚಾರ ಮಾಡಿದ್ದಾರೆ. ಈಗ ಸುಮಲತಾ ಅವರ ಪರ ಫುಲ್ ಟೈಮ್ ಪ್ರಚಾರಮಾಡುತ್ತೇನೆ ಎಂದರು.