Select Your Language

Notifications

webdunia
webdunia
webdunia
webdunia

ಅಂಬರೀಶ್ ಏನು ಅಂತ ಮಂಡ್ಯದವ್ರಿಗೆ ಗೊತ್ತು ಎಂದ ಯಶ್

ಅಂಬರೀಶ್ ಏನು ಅಂತ ಮಂಡ್ಯದವ್ರಿಗೆ ಗೊತ್ತು ಎಂದ ಯಶ್
ಬೆಂಗಳೂರು , ಮಂಗಳವಾರ, 19 ಮಾರ್ಚ್ 2019 (10:55 IST)
ನಾನು, ದರ್ಶನ್ ಕಲಾವಿದರಾಗಿ ಕುಳಿತಿಲ್ಲ. ನಾವು ಅಂಬರೀಶ್ ಅವರ ಕುಟುಂಬದ ಮಕ್ಕಳಾಗಿ ಕುಳಿತಿದ್ದೇವೆ. ಅಂಬರೀಶ್ ಕೂಡ ನನ್ನನ್ನ ಮಗ ಅಂತ ಒಪ್ಪಿಕೊಂಡಿದ್ದಾರೆ. ನಾವು ಯಾವುದೇ ಯೋಚನೆ ಮಾಡುವ ಅವಶ್ಯಕತೆಯಿಲ್ಲ.

ನಾವು ಅವರೆಲ್ಲಿ ಇರ್ತಾರೋ ಅಲ್ಲಿ ಹೆಜ್ಜೆ ಇಡ್ತೇವೆ. ಹೀಗಂತ ನಟ ಯಶ್ ಹೇಳಿದ್ದಾರೆ.

ಮಂಡ್ಯದ ಜನರಿಗೆ ಅಂಬರೀಶ್ ಏನು ಅನ್ನೋದು ಗೊತ್ತು. ಮಂಡ್ಯದ ಜನರು ಅದನ್ನ ಉಳಿಸಿಕೊಂಡು ಬಂದಿದ್ದಾರೆ. ಅವರು ಅಷ್ಟು ಪ್ರೀತಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಸುಮಲತಾ ಸ್ಪರ್ಧೆಗೆ ಇಳಿದಿದ್ದಾರೆ ಎಂದರು.

ಸುಮಲತಾ ಅವರು ಮಂಡ್ಯ ಜನರ ಪ್ರೀತಿಗಾಗಿ ಕಣಕ್ಕಿಳಿಯುತ್ತಿದ್ದಾರೆ. ಮಂಡ್ಯದ ಜನ ಯಾವತ್ತೂ ಕೈ ಬಿಡುವುದಿಲ್ಲ ಅಂತ ನಟ ಯಶ್ ವಿಶ್ವಾಸ ವ್ಯಕ್ತಪಡಿಸಿದ್ರು.

ಸುಮಕ್ಕನಲ್ಲಿ ಸ್ಪರ್ಧೆಗಿಳಿಯುವ ಯೋಗ್ಯತೆಯಿದೆ. ಅವರು ದೊಡ್ಡ ಸೇವೆಯನ್ನ ಮಂಡ್ಯಕ್ಕೆ ಮುಂದೆ ನೀಡ್ತಾರೆ.
ಈಗ ನಿಖಿಲ್ ನಿಂತಿರಬಹುದು. ಆದರೆ ಒಬ್ಬರಿಗೆ ಮಾತ್ರ ಸಪೋರ್ಟ್ ಮಾಡಬಹುದು. ಹಾಸನದಲ್ಲಿ ಪ್ರಜ್ವಲ್ ಕೂಡ ಉತ್ತಮ ಸ್ನೇಹಿತರು. ಅವರು ಕರೆದ್ರೆ ಅಲ್ಲಿಯೂ ಹೋಗಿ ಪ್ರಚಾರ ಮಾಡ್ತೇನೆ ಅಂತ ಯಶ್ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟ ದರ್ಶನ್ ಎಷ್ಟು ಎಲೆಕ್ಷನ್ ಗಳಲ್ಲಿ ಪ್ರಚಾರ ಮಾಡಿದ್ದಾರೆ ಗೊತ್ತಾ?