Select Your Language

Notifications

webdunia
webdunia
webdunia
webdunia

ಪ್ರಚಾರಕ್ಕೆ ಬರದಿದ್ದರೇನಂತೆ ಸುಮಲತಾ ಅಕ್ಕನ ಕೈ ಬಿಡದ ಕಿಚ್ಚ ಸುದೀಪ್

ಸುಮಲತಾ ಅಂಬರೀಶ್
ಬೆಂಗಳೂರು , ಮಂಗಳವಾರ, 19 ಮಾರ್ಚ್ 2019 (09:19 IST)
ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರಕ್ಕೆ ಬರಲು ಉತ್ಸಾಹ ತೋರದಿದ್ದರೂ ಕಿಚ್ಚ ಸುದೀಪ್ ಅಕ್ಕನ ಜತೆಗಿರುವುದಾಗಿ ಹೇಳಿಕೊಂಡಿದ್ದಾರೆ.


ಪ್ರಚಾರಕ್ಕೆ ಹೋಗುವ ಕುರಿತು ಪತ್ರಕರ್ತರು ಕೇಳಿದ್ದಾಗ ದರ್ಶನ್ ಇದ್ದರೆ ಸಾಕು ಎಂದು ಸುದೀಪ್ ಹೇಳಿದ್ದು, ಚರ್ಚೆಗೆ ಕಾರಣವಾಗಿತ್ತು. ಇದೀಗ ನಿನ್ನೆ ದರ್ಶನ್, ಯಶ್ ಮತ್ತು ರಾಕ್ ಲೈನ್ ವೆಂಕಟೇಶ್ ಜತೆಯಲ್ಲಿ ಸುಮಲತಾ ಚುನಾವಣಾ ಕಣಕ್ಕಿಳಿಯುತ್ತಿರುವ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಸುದೀಪ್ ಟ್ವಿಟರ್ ಮೂಲಕ ‘ಅಕ್ಕ’ನ ಬೆಂಬಲಕ್ಕಿರುವುದಾಗಿ ಹೇಳಿಕೊಂಡಿದ್ದಾರೆ.

ಸುಮಲತಾ ಅಕ್ಕ ನಿಮಗೆ ಶುಭ ಹಾರೈಕೆಗಳು. ಮಾಮನನ್ನು ಹತ್ತಿರದಿಂದ ನೋಡಿದವರು ನೀವು. ಅವರ ಬೆಂಬಲ, ಶಕ್ತಿ ನಿಮ್ಮ ಜತೆಗಿದ್ದು, ನಿಮಗೆ ಜನರ ಸೇವೆ ಮಾಡಲು ಬಲ ನೀಡುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ಪ್ರೀತಿ ಮತ್ತು ಹಾರೈಕೆ ನಿಮಗಿದೆ ಅಕ್ಕ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಪ್ರಚಾರಕ್ಕೆ ದರ್ಶನ್ ಇದ್ದರೆ ಸಾಕು ಎಂಬ ಕಿಚ್ಚ ಸುದೀಪ್ ಪ್ರತಿಕ್ರಿಯೆಗೆ ಚಾಲೆಂಜಿಂಗ್ ಸ್ಟಾರ್ ಉತ್ತರವೇನು ಗೊತ್ತಾ?!