ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದು ಮಧ್ಯಮ ವರ್ಗದ ಜನರಿಗೆ ದೊಡ್ಡ ಆಘಾತ ನೀಡಿದಂತಾಗಿದೆ. ಅಡುಗೆಯಲ್ಲಿ ಹೆಚ್ಚು ಬಳಕೆಯಾಗುವ ಟೊಮೆಟೊ ಬೆಲೆ ವಾರದಿಂದ ಹೆಚ್ಚಾಗುತ್ತಿದ್ದು, ಇಂದು ಕೆಜಿ ಟೊಮೆಟೊ ಬೆಲೆ 80 ರಿಂದ 90 ರೂಪಾಯಿಗೆ ಮಾರಾಟವಾಗುತ್ತಿದ್ದು, ಕೆಲವೆಡೆ 100ರ ಗಡಿಯನ್ನ ದಾಟಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಟೊಮೆಟೊ ಪೂರೈಕೆಯಾಗದಿರುವುದೇ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿಂದೆ ಟೊಮೆಟೊ ಬೆಳೆದು ಬೆಲೆ ಸರಿಯಾದ ಬೆಲೆ ಸಿಗದೆ ಕೈ ಸುಟ್ಟುಕೊಂಡಿದ್ದ ಹಲವು ರೈತರು ಟೊಮೆಟೊ ಬೆಳೆಯ ಸಹವಾಸವೇ ಬೇಡ ಅಂತ ಸಣ್ಣ ಪುಟ್ಟ ಚಿಲ್ಲರೆ ಬೆಳೆಗಳ ಮೊರೆ ಹೋಗಿದ್ದಾರೆ. ಇದು ಕೂಡ ಬೆಲೆ ಏರಿಕೆಗೆ ಕಾರಣ ಇರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
 
 			
 
 			
					
			        							
								
																	
	
		ತರಕಾರಿಗಳ ದರ ಪಟ್ಟಿ ನೋಡೋದಾದ್ರೆ 
		ಟೊಮೇಟೊ - ₹100-110/ಕೆಜಿ
		ಕ್ಯಾರೇಟ್ - 80
		ಬೀನ್ಸ್ - 80
		ಬೀಟ್ ರೂಟ್ - 60
 
		ತೊಂಡೆ ಕಾಯಿ - 30
		ಉರುಳಿ ಕಾಯಿ - 80
		ಈರುಳ್ಳಿ - 70
		ಬೆಳ್ಳುಳ್ಳಿ - 140
		ಆಲೂ ಗಡ್ಡೆ - 25
		ಶುಂಠಿ - 200
		ಹಸಿ ಮೆಣಿನಕಾಯಿ - 120 ಸೇರಿ ಪ್ರಮುಖ ತರಕಾರಿಗಳ ರೇಟ್ ಕೈಗೆಟುಕದಂತಾಗಿರೋದು ಗ್ರಾಹಕರಿಗೆ ತಲೆನೋವಾಗಿದೆ.