Publish Date: Wed, 28 Jun 2023 (19:31 IST)
Updated Date: Wed, 28 Jun 2023 (20:08 IST)
ರಸ್ತೆಯಲ್ಲಿ ಹೋಗುತ್ತಿದ್ದ ಮಗು ಮೇಲೆ ಜರ್ಮನ್ ಶೇಫರ್ಡ್ ಎರಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕೆ ಆರ್ ಪುರಂ ನ ಕೃಷ್ಣ ಥಿಯೇಟರ್ ಬಳಿ ಈ ಘಟನೆ ನಡೆದಿದೆ.ಬೆಳಗ್ಗೆ 7.30 ವೇಳೆ ಆಗಿರುವ ಘಟನೆಯಾಗಿದ್ದು,ತಾಯಿ ಜೊತೆ ಹೋಗುತ್ತಿದ್ದಾಗ ನಾಯಿ ದಾಳಿ ಮಾಡಿದೆ.ಮನೆ ಮುಂಭಾಗದ ರಸ್ತೆಯಲ್ಲಿ ನಡೆದು ಹೋಗುವಾಗ ಪಕ್ಕದ ರಸ್ತೆಯಿಂದ ಓಡಿ ಬಂದು ಮಗು ಮೇಲೆ ನಾಯಿ ಎರಗಿದೆ.ತಕ್ಷಣ ಸ್ಥಳೀಯರಿಂದ ಮಗು ರಕ್ಷಣೆ ಮಾಡಲಾಗಿದೆ.ಅಲ್ಲದೇ ಸ್ಥಳೀಯ ಆಸ್ಪತ್ರೆಗೆ ಮಗುವನ್ನ ಪೋಷಕರು ದಾಖಲಿಸಿದ್ದಾರೆ.