Publish Date: Wed, 28 Jun 2023 (16:57 IST)
Updated Date: Wed, 28 Jun 2023 (15:16 IST)
ರಾಜ್ಯದಲ್ಲಿ ವರುಣನ ಮುನಿಸು ಮುಂದುವರೆದಿದ್ದು, ವರುಣ ದೇವನನ್ನ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಿಸಲಾಗಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕೆ.ಜಿ.ಹುಂಡಿ ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿಸಿದ್ದಾರೆ. ಕಪ್ಪೆಗಳ ದಿಬ್ಬಣವನ್ನ ಹೊತ್ತ ಗ್ರಾಮದ ಮಕ್ಕಳು ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ. ಹಿರಿಯರ ಸಮ್ಮುಖದಲ್ಲಿ ಕಪ್ಪೆಗಳ ಮದುವೆ ಮಾಡಿಸಿ ಮಳೆ ಬರುವಂತೆ ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ.