Select Your Language

Notifications

webdunia
webdunia
webdunia
webdunia

ಮುಖಂಡ ಜಾಕೀರ್ ಹುಸೇನ್ ಗೆ ಸಿ.ಟಿ ರವಿ ವಾರ್ನಿಂಗ್?

ಮುಖಂಡ ಜಾಕೀರ್ ಹುಸೇನ್ ಗೆ ಸಿ.ಟಿ ರವಿ ವಾರ್ನಿಂಗ್?
ಚಿಕ್ಕಮಗಳೂರು , ಬುಧವಾರ, 29 ಮಾರ್ಚ್ 2023 (09:58 IST)
ಚಿಕ್ಕಮಗಳೂರು : ಇದು 1947ರ ಭಾರತವಲ್ಲ. ನೀವು ಮಾಡಿದ್ದೆಲ್ಲಾ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತವಲ್ಲ. ಈಗ ಇರುವ ಸರ್ಕಾರ ಬಾಲ ಉದ್ದ ಮಾಡಿದ್ರೆ ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ ಎಂದು ಚಿತ್ರದುರ್ಗದ ಎಸ್.ಡಿ.ಪಿ.ಐ ಮುಖಂಡ ಜಾಕೀರ್ ಹುಸೇನ್ ವಿರುದ್ಧ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ.
 
ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಹಕ್ಕನ್ನು ವಾಪಸ್ ಕೊಡದಿದ್ರೆ ಸಿಎಂ ಬೊಮ್ಮಾಯಿಗೆ ಚಡ್ಡಿ ಬಿಚ್ಚುಸ್ತೀವಿ ಎಂದು ಹೇಳಿಕೆ ನೀಡಿದ್ದ ಎಸ್.ಡಿ.ಪಿ.ಐ. ಮುಖಂಡನ ಹೇಳಿಕೆ ಪ್ರತಿಕ್ರಿಯೆ ನೀಡಿದ್ದಾರೆ. ಅದೇನು ಹೋಗುತ್ತೋ, ತಲೆ ತೆಗೀತಿಯೋ, ನಿನ್ನ ತಾಕತ್ತು ತೋರ್ಸು, ನಿಮ್ಮ ತಾಕತ್ ತೋರಿಸಿ ಆಮೇಲೆ ನಾವು ಅದಕ್ಕೆ ಏನು ಉತ್ತರ ಕೋಡಬೇಕು ಕೊಡುತ್ತೇವೆ ಎಂದು ಹೇಳಿದ್ದಾರೆ. 

ಇದು 1947ರ ಭಾರತವಲ್ಲ. ನೀವು ಮಾಡಿದ್ದೆಲ್ಲವನ್ನೂ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತವೂ ಅಲ್ಲ. ನಿಮ್ಮ ಮೇಲಿನ ಕೇಸ್ಗಳನ್ನ ಹಿಂಪಡೆದು ಮೆರೆಯಲು ಅವಕಾಶ ನೀಡುವ ಸರ್ಕಾರವೂ ಈಗಿಲ್ಲ. ಈಗ ಇರುವ ಸರ್ಕಾರ ಬಾಲ ಉದ್ದ ಮಾಡಿದರೆ ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ ಎಂದು ಎಚ್ಚರಿಕೆ ನೀಡಿದ್ದಾರೆ. ಬಾಂಬ್ ಹಾಕುವವರ ತಲೆ ಮೇಲೆಯೇ ಬಾಂಬ್ ಹಾಕಲು ತಾಕತ್ತಿರುವ ಸರ್ಕಾರ. ಭಯೋತ್ಪಾದನೆ ಮಾಡುವವರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿ ತಲೆ ಎತ್ತದಂತೆ ಮಾಡುವ ತಾಕತ್ತಿನ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪನ!