Select Your Language

Notifications

webdunia
webdunia
webdunia
webdunia

ಜಮೆ ಆಗ್ತಿಲ್ಲ ತಿರುಪತಿ ಹುಂಡಿಯ ವಿದೇಶಿ ಕರೆನ್ಸಿ

ಜಮೆ ಆಗ್ತಿಲ್ಲ ತಿರುಪತಿ ಹುಂಡಿಯ ವಿದೇಶಿ ಕರೆನ್ಸಿ
ಅಮರಾವತಿ , ಬುಧವಾರ, 29 ಮಾರ್ಚ್ 2023 (08:16 IST)
ಅಮರಾವತಿ : ಹಿಂದೂಗಳ ಪವಿತ್ರ ಕ್ಷೇತ್ರ ತಿರುಪತಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ತಿರುಮಲ ತಿರುಪತಿ ತಿಮ್ಮಪ್ಪನ ಸನ್ನಿಧಾನ ಹುಂಡಿಗಳಲ್ಲಿ ಸಂಗ್ರಹವಾದ ವಿದೇಶಿ ಕರೆನ್ಸಿಯನ್ನು ಬ್ಯಾಂಕ್ಗಳಿಗೆ ಜಮೆ ಮಾಡದಂತೆ ನಿರ್ಬಂಧ ಹೇರಿದೆ.
 
ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ತಿಮ್ಮಪ್ಪನ ಹುಂಡಿಗೆ ವಿದೇಶಿ ಕರೆನ್ಸಿ ರೂಪದಲ್ಲಿ ಬಂದಿರುವ 26 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಹಾಗೆಯೇ ಉಳಿದಿದೆ. ಕಳೆದ ಮೂರು ವರ್ಷಗಳಿಂದ ಮೋದಿ ಸರ್ಕಾರ, ಎಫ್ಸಿಆರ್ಎ ಅಡಿಯಲ್ಲಿ ಟಿಟಿಡಿಗೆ ನೀಡಿದ್ದ ಪರವಾನಗಿಯನ್ನು ಅಮಾನತಿನಲ್ಲಿ ಇಟ್ಟಿದೆ. ಹೀಗಾಗಿಯೇ ಬ್ಯಾಂಕ್ಗಳಿಗೆ ವಿದೇಶಿ ಕರನ್ಸಿ ಜಮೆ ಮಾಡಲು ಆಗುತ್ತಿಲ್ಲ ಎನ್ನಲಾಗಿದೆ.

ಈ ಬೆಳವಣಿಗೆ ಬಗ್ಗೆ ಹಲವರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೇಂದ್ರ ಬಿಜೆಪಿ ಸರ್ಕಾರ ಏಕೆ ದೇಗುಲಗಳಿಗೆ ತೊಂದ್ರೆ ಕೊಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, #ಆ್ಯಂಟಿಹಿಂದೂಬಿಜೆಪಿ ಎಂಬ ಹ್ಯಾಶ್ಟ್ಯಾಗ್ ಹಾಕಿದ್ದಾರೆ. ರಣದೀಪ್ ಸುರ್ಜೆವಾಲಾ ಮಾತಾಡಿ, ಮೋದಿ ಸರ್ಕಾರ ದೊಡ್ಡ ದೇವಸ್ಥಾನದ ಮೇಲೆ ದಾಳಿಗೆ ಮುಂದಾಗಿದೆ. ಇದನ್ನು ಖಂಡಿಸ್ತೇವೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟ್ಟರ್ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಮಸ್ಕ್