ಬೆಂಗಳೂರು: ಇಂದು, ನಾಳೆ ದಸರಾ ಆಯುಧ ಪೂಜೆ ಮತ್ತು ಮಹಾನವಮಿ ಹಬ್ಬವಿದ್ದರೂ ಶಿಕ್ಷಕರಿಗೆ ಹಬ್ಬ ಮಾಡಲು ಬಿಡದೇ ಗಣತಿ ಮಾಡಿಸಲಾಗುತ್ತಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಈಗ ಜಾತಿ ಗಣತಿ ನಡೆಯುತ್ತಿದ್ದು, ಅಕ್ಟೋಬರ್ 7 ರೊಳಗಾಗಿ ಗಣತಿ ಮುಗಿಸಲು ಸರ್ಕಾರ ಗಡುವು ನೀಡಿದೆ. ಇದಕ್ಕಾಗಿ ಶಾಲಾ ಶಿಕ್ಷಕರನ್ನು ಬಳಸಲಾಗುತ್ತಿದೆ. ಆದರೆ ಈಗ ದಸರಾ ಹಬ್ಬವಿದ್ದು ಈಗಲೂ ಬಿಡುವು ನೀಡಿಲ್ಲ ಎಂದು ಸಿಟಿ ರವಿ ಕಿಡಿ ಕಾರಿದ್ದಾರೆ.
ದಸರಾ ರಜೆಯಿದ್ದರೂ ಶಿಕ್ಷಕರು ಗಣತಿಯಲ್ಲಿ ಪಾಲ್ಗೊಳ್ಳಬೇಕಿದೆ. ಅದರಲ್ಲೂ ಇಂದು ಆಯುಧ ಪೂಜೆಯಿದ್ದು, ನಾಳೆ ಮಹಾನವಮಿ ಹಬ್ಬವಿದೆ. ಇದು ದಸರಾದಲ್ಲಿ ಎರಡು ಪ್ರಮುಖವಾದ ದಿನಗಳು. ಆದರೆ ಈ ದಿನಗಳಂದೂ ಹಿಂದೂ ಶಿಕ್ಷಕರಿಗೆ ಬಿಡುವು ನೀಡುತ್ತಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಆಯುಧ ಪೂಜೆ ಹಾಗೂ ವಿಜಯದಶಮಿಯ ಈ ಶುಭದಿನದಂದು ಶಾಲಾ ಶಿಕ್ಷಕರಿಗೆ ರಜೆ ನೀಡದೆ, ಅಧಿಕಾರಿಗಳ ಮೂಲಕ ಒತ್ತಡ ಹೇರಿ ಜಾತಿಗಣತಿಗಾಗಿ ದಂಡಿಸುತ್ತಿರುವ ಹಿಂದೂ ವಿರೋಧಿ ಸರ್ಕಾರಕ್ಕೆ ನನ್ನ ಧಿಕ್ಕಾರ ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.