Publish Date: Sat, 13 Sep 2025 (17:03 IST)
Updated Date: Sat, 13 Sep 2025 (17:16 IST)
ಮಂಡ್ಯ: ಸತ್ಯ ಹೇಳಿದ್ರೆ ಎಫ್‌ಐಆರ್ ಹಾಕುತ್ತಾರೆ ಅಂತ ಸತ್ಯ ಹೇಳೋದನ್ನು ನಿಲ್ಲಿಸೋಕೆ ಆಗುತ್ತಾ. ಹಾಗಂತ ಗಣಪತಿ ಮೂರ್ತಿ ಮೇಲೆ ಕಲ್ಲು ಹೊಡೆದರೆ ಸಹಸುವುದಕ್ಕೆ ಆಗುತ್ತಾ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಶ್ನೆ ಮಾಡಿದರು.
ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ವಿಚಾರವಾಗಿ ತನ್ನ ಮೇಲೆ ಪ್ರಕರಣ ದಾಖಲಾದ ಬಳಿಕ ಮದ್ದೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಒಂದು ವೇಳೆ ಅವರ ಮೇಲೆ ಕಲ್ಲು ಹೊಡೆದ್ರೆ ಸಹಿಸಿಕೊಳ್ಳುತ್ತಾರಾ, ಸಹಿಸಿಕೊಳ್ಳೊದಾದ್ರೆ ನಮಗೆ ಸಹನೆಯ ಪಾಠ ಮಾಡಲಿ ಎಂದರು.
ಗೃಹಸಚಿವ ಪರಮೇಶ್ವರ್ ಅವರೇ ಸಂವಿಧಾನ ಉಳಿಯಬೇಕು. ಅದರ ಜಾಗದಲ್ಲಿ ಷರಿಯತ್ ಕೂರಬಾರದು. ಈಗ ಎಚ್ಚೆತ್ತುಕೊಂಡಲ್ಲಿ ನಮ್ಮ ಹಾಗೂ ನಿಮ್ಮ ಮಕ್ಕಳು ಉಳಿದುಕೊಳ್ಳುತ್ತಾರೆ. ನಾವು ಹೇಗೋ ಇನ್ನು 20–25 ವರ್ಷ ಜಗಳ ಮಾಡಿಕೊಂಡು ಆಯಸ್ಸು ಮುಗಿಸುತ್ತೇವೆ. ನಮ್ಮ ಮೊಮ್ಮಕ್ಕಳ ಕಾಲಕ್ಕೆ ಇಂಡಿಯಾ ಇಂಡಿಯಾವಾಗಿ ಉಳೀಬೇಕು. ಇದಕ್ಕೆ ಜಾಗೃತಿ ಅಗತ್ಯ ಎಂದರು.
ಮುಸ್ಲಿಮರ ದುರ್ಬೋಧನೆಯನ್ನು ನಿಲ್ಲಿಸದಿದ್ರೆ ಶಾಂತಿ ಎಲ್ಲಿ ನೆಲೆಯುತ್ತದೆ. ಮುಸ್ಲಿಮರ ಮತೀಯ ಗ್ರಂಥಗಳು ಕಲ್ಲು ಹೊಡೆಯುವಂತೆ ಬೋಧನೆ ಮಾಡುತ್ತವೆ. ಅಲ್ಲಿ ಸಹಬಾಳ್ವೆಗೆ ಜಾಗವಿಲ್ಲ. ಈ ಬಗ್ಗೆ ಎಸ್‌ಐಟಿ ಅಧ್ಯಯನ ನಡೆಸಲಿ. ನಮ್ಮ ಗ್ರಂಥ ಅಧ್ಯಯನ ಮಾಡಿದ್ರೆ ದೇವರಾಗುತ್ತಾರೆ, ಅವರ ಗ್ರಂಥ ಅಧ್ಯಯನ ಮಾಡಿದ್ರೆ ಬಿನ್ ಲಾಡೆನ್ ಆಗುತ್ತಾರೆ ಎಂದು ಆರೋಪಿಸಿದರು.