Select Your Language

Notifications

webdunia
webdunia
webdunia
webdunia

ಜಾತಿಗಣತಿಗೆ 425 ಕೋಟಿ ರೂ ಖರ್ಚು, ಉಪಯೋಗವಾದ್ರೆ ಸಾಕು: ಬಿವೈ ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಶನಿವಾರ, 13 ಸೆಪ್ಟಂಬರ್ 2025 (15:46 IST)
ಬೆಂಗಳೂರು: ಕರ್ನಾಟಕ ಸರ್ಕಾರ ಜಾತಿಗಣತಿ ಮಾಡಲು ಮುಂದಾಗಿದ್ದು ಇದಕ್ಕೆ 425 ಕೋಟಿ ರೂ ಖರ್ಚು ಮಾಡಲಿದೆ. ಈ ವರದಿಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ  ವಿಜಯೇಂದ್ರ ಪ್ರತಿಕ್ರಿಯಿಸಿದ್ದು ಈ ಹಣ ಹಿಂದನಂತೆ ದುರುಪಯೋಗದೇ ಉಪಯೋಗವಾದರೆ ಸಾಕು ಎಂದಿದ್ದಾರೆ.

10 ವರ್ಷಗಳ ಹಿಂದೆ ಜಾತಿಗಣತಿಯಾಗಿದ್ದಾಗ 165 ಕೋಟಿ ರೂ. ಖರ್ಚಾಗಿತ್ತು. ಅದು ಬೇಡವೆಂದು ಹೈಕಮಾಂಡ್ ಹೇಳಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಈಗ ಹೊಸದಾಗಿ ಜಾತಿಗಣತಿ ಮಾಡಲು ಮುಂದಾಗಿದೆ. ಇದಕ್ಕೆ 425 ಕೋಟಿ ರೂ ಖರ್ಚಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿವೈ ವಿಜಯೇಂದ್ರ ‘ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ₹165 ಕೋಟಿ ವ್ಯಯಿಸಿ ಕಾಂತರಾಜು ಆಯೋಗ ನಡೆಸಿದ್ದ ಜಾತಿ ಗಣತಿಯನ್ನು 10 ವರ್ಷಗಳ ಹಳೆಯದು ಎಂಬ ಕಾರಣ ನೀಡಿ ಕಸದ ಬುಟ್ಟಿಗೆ ಹಾಕಿದೆ. ಇದೀಗ ಮತ್ತೆ ₹425 ಕೋಟಿ ರೂ ವ್ಯಯಿಸಿ ಜಾತಿ ಗಣತಿ ನಡೆಸಲು ಮುಂದಾಗಿದೆ. ಮುಖ್ಯಮಂತ್ರಿಗಳೇ, ಕಾಂತರಾಜು ಆಯೋಗದ ವರದಿಯಂತೆ ಇದೂ ಕೂಡ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಳ್ಳುವ ಸಾಧನವಾಗದಿರಲಿ.

ಅತ್ಯಲ್ಪ ಅವಧಿಯಲ್ಲಿ 7 ಕೋಟಿ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ತಯಾರಿಸುವುದಾಗಿ ಹೇಳಿದ್ದೀರಿ ಆದರೆ ಕೇವಲ ಪರಿಶಿಷ್ಟರ ಜಾತಿಗಣತಿ ನಡೆಸಲು ನಾಗಮೋಹನ್ ದಾಸ್ ಆಯೋಗವು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ಪಡೆದಿತ್ತು, ಈಗ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ತಾಂತ್ರಿಕತೆ ಬಳಸಿಯಾದರೂ ಹೇಗೆ ಸಾಧ್ಯ? ಎಂಬ ಪ್ರಶ್ನೆ ಜನರಲ್ಲಿ ಮೂಡಿರುವುದು ಸಹಜವೆ.

ಕಾಂತರಾಜು ಆಯೋಗಕ್ಕೆ ವ್ಯಯಿಸಿದ್ದ ₹165 ಕೋಟಿ ರೂ ನಂತೆ ಈಗಿನ ₹425 ಕೋಟಿ ರೂ. ಹಣ ನೀರಿಗೆ ಹೋಮವಾಗದಿರಲಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2 ವರ್ಷಗಳ ಬಳಿಕ ಮಣಿಪುರಕ್ಕೆ ಮೋದಿ: ಪ್ರಿಯಾಂಕಾ ಗಾಂಧಿಯಿಂದ ಟೀಕೆ