ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಹೃದಯಭಾಗವಾದ ಪುರಸಭೆ ಆವರಣದಲ್ಲಿ ಸ್ಥಾಪಿತವಾದ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಗಣೇಶ ವಿಗ್ರಹಕ್ಕೆ ಮಹಿಳೆಯೊಬ್ಬರು ಚಪ್ಪಲಿ ಹಾರ ಹಾಕಿ, ಹಿಂದೂ ಭಕ್ತರ ಭಾವನೆಗೆ ಧಕ್ಕೆ ತಂದ ಘಟನೆ ವರದಿಯಾಗಿದೆ.
ಈ ಸಂಬಂಧ ಬಿಜೆಪಿ ನಾಯಕ ಸಿಟಿ ರವಿ ಅವರು ಆಕ್ರೋಶ ಹೊರಹಾಕಿ, ನಮ್ಮ ಹಿಂದೂ ಸಮಾಜವನ್ನು ಕೆರಳಿಸುವ, ಕೆಣಕಿಸುವ ರೀತಿಯಲ್ಲಿ ಅಪವಿತ್ರಗೊಳಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಯಾಕೆಂದರೆ ಹಿಂದೂ ಸಮಾಜವನ್ನೇ ಕೆಣಕುವ ಕೆಲಸವಾಗುತ್ತಿದೆ. ಹಸುವಿನ ಕೆಚ್ಚಲನ್ನು ಕೊಯ್ದು, ಆತ ಮಾನಸಿಕ ಅಸ್ವಸ್ಥ ಎಂದು ಕಥೆ ಕಟ್ಟಲಾಗುತ್ತದೆ. ಅವರ ಮಾನಸಿಕ ಅಸ್ವಸ್ಥನಾ, ಅಥವಾ ನಾಟಕವಾಡುತ್ತಿದ್ದಾನಾ ಎಂದು ಪ್ರಶ್ನೆ ಮಾಡಿದರು.
ಗಣೇಶೋತ್ಸವದ ಮೆರವಣಿಗೆ ಮೇಲೆ ಕಲ್ಲು ಹೊಡೀತಾರೆ ಆಮೇಲೆ ತಪ್ಪಾಯ್ತು ಕ್ಷಮಿಸಿ ಎಂದು ಕೇಳುತ್ತಾರೆ. ತಮ್ಮ ಮಸೀದಿ ಮುಂದೆ ಬರ್ಬಾದು ಎಂದು ಪೆಟ್ರೋಲ್ ಬಾಂಬ್ ಹಾಕಿ ಕಿಡಿಗೇಡಿಗಳು ಮಾಡಿದ್ದು, ನಾವೆಲ್ಲ ಹಂಗಿಲ್ಲ ಎಂದು ಹೇಳುತ್ತಾರೆ.
ಇದೀಗ ಈ ವಿಚಾರಕ್ಕೆ ಕಥೆ ಕಟ್ಟುವ ಕೆಲಸವಾಗಬಾರದು. ಈ ಸಂಬಂಧ ಸಮಗ್ರ ತನಿಖೆ ನಡೆಸಲಿ. ಇದೀಗ ಚಪ್ಪಲಿ ಹಾರ ಹಾಕಿರುವವಳು ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತಾರೆ. ಮಾನಸಿಕ ಅಸ್ವಸ್ಥೆಯಾದ್ರೆ ಆಕೆಗೆ ಮುಖ ಮುಚ್ಚಿಕೊಂಡು ಬರ್ಬೇಕು ಅಂತಾ ಗೊತ್ತಾಗುತ್ತಾ.
ಗಣೇಶ ವಿಗ್ರಹವನ್ನೇ ಅಪವಿತ್ರ ಗೊಳಿಸಬೇಕೆಂದು ಆಕೆಗೆ ಗೊತ್ತಿದ್ಯಾ. ಇದರ ಉದ್ದೇಶ, ಅಶಾಂತಿ, ಹಿಂದೂ ಮುಸ್ಲಿಂ ನಡುವೆ ಜಗಳ ತರುವುದು, ಈ ಷಡ್ಯಂತ್ರದ ಹಿಂದೆ ರಾಷ್ಟ್ರ ವಿರೋಧಿ ಶಕ್ತಿಗಳು ಕೈಜೋಡಿಸಿದೆ. ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಈ ಸಂಬಂಧ ಸಮಗ್ರ ತನಿಖೆಯಾಗಬೇಕೆಂದು.