Select Your Language

Notifications

webdunia
webdunia
webdunia
webdunia

ಮಹೇಶ್‌ ಶೆಟ್ಟಿ ತಿಮರೋಡಿ ಜತೆಗಿನ ಮಾತುಕತೆ ವಿಡಿಯೋ, ಹೊಸ ಬಾಂಬ್ ಸಿಡಿಸಿದ ಚಿನ್ನಯ್ಯನ 2ನೇ ಪತ್ನಿ

ಮಹೇಶ್ ಶೆಟ್ಟಿ ತಿಮರೋಡಿ

Sampriya

ಚಾಮರಾಜನಗರ , ಶನಿವಾರ, 20 ಸೆಪ್ಟಂಬರ್ 2025 (17:51 IST)
Photo Credit X
ಚಾಮರಾಜನಗರ: ಧರ್ಮಸ್ಥಳದ ಸುತ್ತಾಮುತ್ತಾ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ದಿನಕ್ಕೊಂದು ತಿರುವು ಸಿಗುತ್ತಲೇ ಇದೆ. ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಜತೆ ಈ ಹಿಂದೆ ಚಿನ್ನಯ್ಯ ಮಾತನಾಡಿರುವ ವಿಡಿಯೋವೊಂದು ರಿಲೀಸ್ ಆಗಿತ್ತು. 

ಈ ಸಂಬಂಧ ಚಿನ್ನಯ್ಯನ ಎರಡನೇ ಹೆಂಡತಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಧ್ಯಮವೊಂದರಲ್ಲಿ ಮಾತನಾಡಿದ ಚಿನ್ನಯ್ಯನ ಪತ್ನಿ, ನಮ್ಮನ್ನು ತಿಮರೋಡಿ ಬಳಿಗೆ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ ವಿಠಲ್ ಗೌಡ ಎಂದು ಹೇಳಿಕೊಂಡಿದ್ದಾರೆ.  

ನಾನು ಹೋದಾಗ ತಿಮರೋಡಿ ಮನೆ ಇದು ಅಂತ ಗೊತ್ತಿರಲಿಲ್ಲ. ಸ್ವಲ್ಪ ಕೆಲಸ ಉಂಟು ಅಂತ ವಿಠಲ ಕರೆದುಕೊಂಡ ಹೋದ. ಬುರುಡೆಯನ್ನು ತಮಿಳುನಾಡು, ಕೇರಳ, ಬೆಂಗಳೂರು, ದೆಹಲಿ ಅಂತ ಹೇಳ್ತಿದ್ದರು ಅಂತ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸೌಜನ್ಯ ಮಾವ ವಿಠಲ್ ಬುರುಡೆಯನ್ನು ಗಿರೀಶ್ ಮಟ್ಟಣ್ಣನವರ್ ಮನೆಯಲ್ಲಿಟ್ಟಿದ್ದರು. ತಿಮರೋಡಿ ಮನೆಗೆ ಛೇಂಬರ್ ಕೆಲಸವಿದೆ ಎಂದು ಹೇಳಿ ಕರೆದುಕೊಂಡು ಹೋಗಿ ಬಿಟ್ಟಿದ್ದರು. 

ಅಲ್ಲಿ ಟೀ ಕುಡಿದ್ವಿ. ಮದ್ವೆ ಆಗಿ ಎಷ್ಟು ವರ್ಷ ಆಯ್ತಮ್ಮಾ ಅಂತ ಕೇಳಿದ್ರು, 4 ವರ್ಷ ಆಯ್ತು ಅಂತ ಹೇಳಿದ್ದೆ. ಒಟ್ಟಿನಲ್ಲಿ ಈ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವುದೇ ಈ ಗ್ಯಾಂಗ್ ಉದ್ದೇಶವಾಗಿತ್ತು. ಇದೀಗ ನಮ್ಮ ವಿಡಿಯೋ ವೈರಲ್ ಮಾಡಿದ್ದಾರೆ. ಮುಂದೆ ತಾನಾಸಿ ಹಾಗೂ ಚಿನ್ನಯ್ಯ ಅಕ್ಕನ ವಿಡಿಯೋ ಕೂಡ ವೈರಲ್ ಮಾಡ್ತಾರೆ. ಈ ಪ್ರಕರಣದಲ್ಲಿ ನನ್ನ ಗಂಡನನ್ನು ಸಿಕ್ಕಿಸುವ ಹುನ್ನಾರ ಎಂದು ಮಲ್ಲಿಕಾ ಕಣ್ಣೀರು ಹಾಕಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಜುಬೀನ್ ಗಾರ್ಗ್ ಸಾವಿನ ಬಗ್ಗೆ ಅನುಮಾನ, ತನಿಖೆಗೆಗೆ ಅಸ್ಸಾಂ ಸಿಎಂ ಆದೇಶ