Select Your Language

Notifications

webdunia
webdunia
webdunia
webdunia

ಹಸುಗಳು ಬೆಳೆ ಹಾಳು ಮಾಡಬಾರದೆಂದು ನೀರಿಗೆ ವಿಷ ಬೆರೆಕೆ; 12ಕ್ಕೂ ಹೆಚ್ಚು ಹಸುಗಳು ಸಾವು

ಹಸುಗಳು ಬೆಳೆ ಹಾಳು ಮಾಡಬಾರದೆಂದು ನೀರಿಗೆ ವಿಷ ಬೆರೆಕೆ; 12ಕ್ಕೂ ಹೆಚ್ಚು ಹಸುಗಳು ಸಾವು
ಚಾಮರಾಜನಗರ , ಶನಿವಾರ, 4 ಜುಲೈ 2020 (09:11 IST)
ಚಾಮರಾಜನಗರ : ಬೆಳೆ ಹಾಳು ಮಾಡುತ್ತವೆ ಎಂದು ಹಸುಗಳು ಕುಡಿಯುವ ನೀರಿಗೆ ವಿಷ ಬೆರೆಸಿ 12ಕ್ಕೂ ಹೆಚ್ಚು ಹಸುಗಳನ್ನು ಕೊಂದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹುತ್ತೂರು ಗ್ರಾಮದಲ್ಲಿ ನಡೆದಿದೆ.

ಬಯಲಿನಲ್ಲಿ ಮೇಯಲು ಹೋಗುತ್ತಿದ್ದ ಹಸುಗಳು ಹುತ್ತೂರು ಗ್ರಾಮದ ಸುತ್ತಮುತ್ತಲಿರುವ ತೋಟಗಳಿಗೆ ನುಗ್ಗಿ ಅಲ್ಲಿದ್ದ ಬೆಳೆಗಳನ್ನು ಹಾಳು ಮಾಡುತ್ತವೆ ಎಂದು ತೋಟದ ಮಾಲೀಕರು ಹಸುಗಳು ಪ್ರತಿದಿನ ಕುಡಿಯುತ್ತಿದ್ದ ಹೊರವಲಯದಲ್ಲಿರುವ ಹಳ್ಳವೊಂದರ ನೀರಿಗೆ ವಿಷ ಬೆರೆಸಿದ್ದಾರೆ.

ಇದನ್ನು ಕುಡಿದ ಪರಿಣಾಮ 12 ಕ್ಕೂ ಹೆಚ್ಚು ಹಸುಗಳು ದಾರಿ ಮಧ್ಯದಲ್ಲಿಯೇ ಸಾವನಪ್ಪಿವೆ, ಅಲ್ಲದೇ ಕೆಲವು ಹಸುಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದರೂ ಕೂಡ 50ಕ್ಕೂ ಹೆಚ್ಚು ಹಸುಗಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಭೇಟಿಯಿಂದ ಬೆಚ್ಚಿದ ಚೀನಾ