ವಿಷ್ಣು ಸ್ಮಾರಕ ವಿಚಾರ ಕೆದಕಿದ ನೆಟ್ಟಿಗರಿಗೆ ಸುಮಲತಾ ಅಂಬರೀಶ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?

ಮಂಗಳವಾರ, 30 ಜೂನ್ 2020 (09:09 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಕಂಠೀರವ ಸ್ಟುಡಿಯೋದಲ್ಲಿ 1.5 ಎಕರೆ ಭೂಮಿ ಮತ್ತು 5 ಕೋಟಿ ರೂ. ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ ನಿರ್ಧಾರವನ್ನು ಪ್ರಕಟಿಸಿದ ಸುಮಲತಾ ಅಂಬರೀಶ್ ಗೆ ಕೆಲವು ನೆಟ್ಟಿಗರು ವಿಷ್ಣು ಸ್ಮಾರಕ ವಿಚಾರವನ್ನು ನೆನಪಿಸಿದ್ದಾರೆ.


ಅಂಬರೀಶ್ ಗೂ ಮೊದಲೇ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕು. ಅದರ ಬಗ್ಗೆ ಮೊದಲು ಮಾತನಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆದಕಿದವರಿಗೆ ಸುಮಲತಾ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.

‘ವಿಷ್ಣುವರ್ಧನ್ ಕುಟುಂಬದ ಇಚ್ಛೆಯಂತೆ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಜತೆಗೆ ಸ್ಮಾರಕ ನಿರ್ಮಾಣವೂ ಪ್ರಗತಿಯಲ್ಲಿದೆ. 10 ಕೋಟಿ ರೂ. ಹಿಂದಿನ ಸರ್ಕಾರ ಇದಕ್ಕೆ ಮೀಸಲಿಟ್ಟಿದೆ. ಇದರಲ್ಲಿ 5 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ ಎಂದು ನನ್ನ ಗಮನಕ್ಕೆ ಬಂದಿದೆ. ಇದರ ಬಗ್ಗೆ ಅವರ ಅಭಿಮಾನಿ ಎನಿಸಿಕೊಂಡಿರುವ ನಿಮಗೆ ಅರಿವಿಲ್ಲ ಎನ್ನುವುದೇ ನನಗೆ ಅಚ್ಚರಿಯುಂಟುಮಾಡುತ್ತದೆ. ನಿಜವಾದ ಅಭಿಮಾನಿಯಾಗಿದ್ದರೆ ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಿ’ ಎಂದು ಸುಮಲತಾ ವಿಷ್ಣು ಸ್ಮಾರಕದ ನೀಲ ನಕ್ಷೆಯ ಫೋಟೋ ಸಮೇತ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾದ ಸ್ಯಾಂಡಲ್ ವುಡ್ ಸ್ಟಾರ್ ಗಳ ಬರ್ತ್ ಡೇ