Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ನಡುವೆ ಪ್ರತಿಭಟನೆಗೆ ಇಳಿದ ನೌಕರರು

ಲಾಕ್ ಡೌನ್ ನಡುವೆ ಪ್ರತಿಭಟನೆಗೆ ಇಳಿದ ನೌಕರರು
ಶ್ರೀರಂಗಪಟ್ಟಣ , ಮಂಗಳವಾರ, 9 ಜೂನ್ 2020 (19:47 IST)
ಲಾಕ್ ಡೌನ್ 5.0 ನಡುವೆ ಗಾರ್ಮೆಂಟ್ ಕಂಪನಿ ನೌಕರರು ಪ್ರತಿಭಟನೆ ಹಾದಿ ತುಳಿದಿದ್ದಾರೆ.

ಶ್ರೀರಂಗಪಟ್ಟಣದ ಯೂರೋ ಕ್ಲಾಥಿಂಗ್ ಕಂಪನಿಯ ಗೋಕುಲ್ ದಾಸ್ ಗಾರ್ಮೆಂಟ್ಸ್ ಗೆ  ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದರು. ನೌಕರರನ್ನು ಕೆಲಸದಿಂದ ತೆಗೆದು ಕಾರ್ಖಾನೆ ಮುಚ್ಚುವ ಬಗ್ಗೆ ಮಾಹಿತಿ ಹಿನ್ನೆಲೆ ಗಾರ್ಮೆಂಟ್ಸ್ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ. ಹೊರ ಹಾಕುವ ಆತಂಕದಲ್ಲಿರುವ  ನೌಕರರಿಗೆ ಅನ್ಯಾಯವಾಗದಂತೆ ಗಾರ್ಮೆಂಟ್ಸ್ ನಡೆಸಿ ಅವರಿಗೆ ವೇತನ ನೀಡಿ ಎಂದು ಸೂಚನೆ ನೀಡಿದರು.

ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರೊಂದಿಗೂ ಸಮಾಲೋಚನೆ ನಡೆಸಿದರು. ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇತರರು ಜೊತೆಯಲಿದ್ದರು. ದೇಶದಲ್ಲಿ ಲಾಕ್ ಡೌನ್ ಹಿನ್ನಲೆಯಿಂದ ತಯಾರಾದ ವಸ್ತುಗಳು ರಫ್ತಾಗದ ಹಿನ್ನಲೆ ನೌಕರರಿಗೆ ವೇತನ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ಮುಖ್ಯಸ್ಥರು ಹೇಳಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಗೆ ಬಿಡದ ‘ಮಹಾ’ ವೈರಸ್ ಕಂಟಕ