Publish Date: Tue, 09 Jun 2020 (19:13 IST)
Updated Date: Tue, 09 Jun 2020 (19:15 IST)
ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಬಂದವರಲ್ಲಿ ಮತ್ತೆ ಹೊಸದಾಗಿ 10 ಜನರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 10 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.
10 ರೋಗಿಗಳು ಸರ್ಕಾರಿ ಕ್ವಾರಂಟೈನ್ ದಲ್ಲಿದ್ದವರಾಗಿದ್ದು, ಕೋವಿಡ್-19 ಸೋಂಕು ದೃಢವಾದ ನಂತರ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ769 ಕ್ಕೆ ಏರಿದೆ. ಇದರಲ್ಲಿ ಇದೂವರೆಗೆ 213 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 548 ಸಕ್ರೀಯ ರೋಗಿಗಳಿದ್ದಾರೆ ಎಂದು ಶರತ್ ಬಿ. ಹೇಳಿದ್ದಾರೆ.