Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣಕ್ಕೆ ಸೀಮಿತವಾದ ಸ್ಯಾಂಡಲ್ ವುಡ್ ಸ್ಟಾರ್ ಗಳ ಬರ್ತ್ ಡೇ

ಸಾಮಾಜಿಕ ಜಾಲತಾಣಕ್ಕೆ ಸೀಮಿತವಾದ ಸ್ಯಾಂಡಲ್ ವುಡ್ ಸ್ಟಾರ್ ಗಳ ಬರ್ತ್ ಡೇ
ಬೆಂಗಳೂರು , ಮಂಗಳವಾರ, 30 ಜೂನ್ 2020 (09:05 IST)
ಬೆಂಗಳೂರು: ಕೊರೋನಾ ಎಂಬ ಒಂದು ಮಹಾಮಾರಿ ನಮ್ಮೆಲ್ಲರ, ಎಲ್ಲಾ ರೀತಿ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಈ ವಿಚಾರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರದ್ದೂ ಇದೇ ಪರಿಸ್ಥಿತಿಯಾಗಿದೆ.


ಪ್ರತೀ ವರ್ಷ ಹುಟ್ಟುಹಬ್ಬವೆಂದರೆ ಮನೆ ಸುತ್ತ ಜನ, ಹಾರ, ತುರಾಯಿ, ಕೇಕ್, ಹೊಸ ಚಿತ್ರಗಳ ಘೋಷಣೆ ಎಲ್ಲವೂ ಸಹಜ. ಆದರೆ ಈ ವರ್ಷ ಎಲ್ಲಾ ಸ್ಟಾರ್ ನಟರೂ ಅನಿವಾರ್ಯವಾಗಿ ಬರ್ತ್ ಡೇ ಕ್ಯಾನ್ಸಲ್ ಮಾಡುತ್ತಿದ್ದು, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳಿಗಷ್ಟೇ ಬರ್ತ್ ಡೇ ಸೀಮಿತವಾಗುತ್ತಿದೆ.

ಜುಲೈ ತಿಂಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ  ಹಲವು ನಟರ ಬರ್ತ್ ಡೇ ಇದೆ. ಗೋಲ್ಡನ್ ಸ್ಟಾರ್ ಗಣೇಶ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಲೂಸ್ ಮಾದ ಯೋಗಿ ಮುಂತಾದ ನಟರು ಇದೇ ತಿಂಗಳು ಬರ್ತ್ ಡೇ ಆಚರಿಸಿಕೊಳ್ಳುತ್ತಿರುವುದು. ಆದರೆ ಈ ವರ್ಷ ಈ ಎಲ್ಲಾ ನಟರೂ ಈಗಾಗಲೇ ತಮ್ಮ ಬರ್ತ್ ಡೇ ಸಾರ್ವಜನಿಕವಾಗಿ ಆಚರಿಸಿಕೊಳ್ಳಲ್ಲ ಎಂದು ಅಭಿಮಾನಿಗಳಿಗೆ ಈಗಾಗಲೇ ಸೂಚನೆ ಕೊಟ್ಟಿದ್ದಾರೆ. ಕೊರೋನಾ ಬಂದು ಜನರು ಸಂಕಷ್ಟದಲ್ಲಿರುವಾಗ ಸಂಭ್ರಮದ ಬರ್ತ್ ಡೇ ಮಾಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವುದು ಬೇಡ ಎಂದು ಈ ಎಲ್ಲಾ ನಟರೂ ತೀರ್ಮಾನ ಕೈಗೊಂಡಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಬರ್ತ್ ಡೇ ವಿಶ್ ಗೆ ಮಾತ್ರ ಇವರ ಬರ್ತ್ ಡೇ ಸೀಮಿತವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಟರೀಗ ಗಡ್ಡಧಾರಿಗಳು! ಸ್ಟಾರ್ ಗಳ ಲಾಕ್ ಡೌನ್ ಫ್ಯಾಷನ್