Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಟರೀಗ ಗಡ್ಡಧಾರಿಗಳು! ಸ್ಟಾರ್ ಗಳ ಲಾಕ್ ಡೌನ್ ಫ್ಯಾಷನ್

ಸ್ಯಾಂಡಲ್ ವುಡ್ ನಟರೀಗ ಗಡ್ಡಧಾರಿಗಳು! ಸ್ಟಾರ್ ಗಳ ಲಾಕ್ ಡೌನ್ ಫ್ಯಾಷನ್
ಬೆಂಗಳೂರು , ಮಂಗಳವಾರ, 30 ಜೂನ್ 2020 (09:02 IST)
ಬೆಂಗಳೂರು: ಲಾಕ್ ಡೌನ್ ಎಂಬುದು ಜನರ ಜೀವನದಲ್ಲಿ ಎಷ್ಟು ಬದಲಾವಣೆ ತಂದಿದೆಯೋ ಅಷ್ಟೇ ಟ್ರೆಂಡ್ ಕೂಡಾ ಬದಲಾಯಿಸಿದೆ. ಸ್ಯಾಂಡಲ್ ವುಡ್ ನ ಬಹುತೇಕ ನಟರು ಈಗ ಗಡ್ಡಧಾರಿಗಳಾಗಿದ್ದಾರೆ! ಎಲ್ಲವೂ ಲಾಕ್ ಡೌನ್ ಇಫೆಕ್ಟ್.


ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್, ಕಿರುತೆರೆ ಸ್ಟಾರ್ ನಟ ಚಂದನ್ ಕುಮಾರ್, ಜಗ್ಗೇಶ್ ಸೇರಿದಂತೆ ಅನೇಕ ನಟರು ಈಗಾಗಲೇ ತಮ್ಮ ಗಡ್ಡ ಲುಕ್ ಮೂಲಕ ಗಮನ ಸೆಳೆದಿದ್ದಾರೆ.

ಅನಿವಾರ್ಯವಾಗಿ ಶೇವಿಂಗ್, ಹೇರ್ ಕಟಿಂಗ್ ಮಾಡಿಸಲಾಗದೇ ಹೊಸ ಲುಕ್ ಗೆ ಒಗ್ಗಿಕೊಂಡಿದ್ದ ಸ್ಟಾರ್ ನಟರು ಈಗ ಅದನ್ನೇ ಫ್ಯಾಶನ್ ಮಾಡಿಕೊಂಡಿದ್ದು ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ. ಕೆಲವು ನಟರಿಗೆ ಈ ಲುಕ್ ಬಹಳವಾಗಿ ಒಪ್ಪಿಕೊಳ್ಳುತ್ತಿದ್ದು, ಮುಂದಿನ ಸಿನಿಮಾಗೆ ಇದೇ ಲುಕ್ ನಲ್ಲೇ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಒಟ್ಟಾರೆ ಅನಿವಾರ್ಯವಾಗಿ ಬಿಟ್ಟುಕೊಂಡಿದ್ದ ಗಡ್ಡ ಲುಕ್ ಈಗ ಟ್ರೆಂಡ್ ಸೃಷ್ಟಿಸಿರುವುದು ಸುಳ್ಳಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರನಟಿಗೆ ಶಾಕ್ ಕೊಟ್ಟ ಕರೆಂಟ್ ಬಿಲ್