ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪರೂಪಕ್ಕೆ ಫೋಟೋವೊಂದನ್ನು ಪ್ರಕಟಿಸಿದ್ದು, ಇದೀಗ ಅವರಿಗೇ ಫಜೀತಿ ತಂದಿದೆ.
ಹೊಸ ಲಾಕ್ ಡೌನ್ ಗೆ ಸಂಬಂಧಪಟ್ಟಂತೆ ತಮಾಷೆಯ ಸಂದೇಶ ಬರೆದುಕೊಂಡಿರುವ ಯಶ್ ಪತ್ನಿ ರಾಧಿಕಾ ಜತೆಗಿರುವ ಫೋಟೋವೊಂದನ್ನು ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಯಶ್ ಹಣೆ ಮೇಲೆ ಮೂರು ಬೆರಳಿಟ್ಟುಕೊಂಡಿರುವ ವಿಶಿಷ್ಟ ಭಂಗಿ ತೋರಿರುವುದು ನೋಡಿ ಅಭಿಮಾನಿಗಳು ಈಗ ರಾಕಿಂಗ್ ದಂಪತಿ ಮೂರನೇ ಮಗುವಿನ ಸುಳಿವು ನೀಡಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಬಾಸ್ ಮೂರನೇ ಮಗುವಿನ ಸುಳಿವು ನೀಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಕಾಲೆಳೆದಿದ್ದಾರೆ. ಇನ್ನು ಕೆಲವರು ಕೆಜಿಎಫ್ 3 ಬಗ್ಗೆ ಸುಳಿವು ನೀಡಿರಬೇಕು ಎಂದು ಊಹಿಸಿದ್ದಾರೆ. ಅಂತೂ ಈಗಾಗಲೇ ಇಬ್ಬರು ಮುದ್ದಾದ ಮಕ್ಕಳಿಗೆ ಪೋಷಕರಾಗಿರುವ ಯಶ್ ದಂಪತಿ ಹೀಗೊಂದು ಫೋಟೋ ಪ್ರಕಟಿಸಿ ಟ್ರೋಲ್ ಆಗಿದ್ದಾರೆ.