ರಾಜ್ಯದಲ್ಲಿನ್ನು ಪ್ರತೀ ಸಂಡೇ ಕರ್ಫ್ಯೂ: ಕೊರೋನಾ ತಡೆಯಲು ಹೊಸ ಮಾರ್ಗ

ಭಾನುವಾರ, 28 ಜೂನ್ 2020 (09:41 IST)
ಬೆಂಗಳೂರು: ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ ತಡೆಯಲು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಅಳವಡಿಸಲು ಮುಂದಾಗಿದೆ.


ಮುಂದಿನ ವಾರದಿಂದ ಪ್ರತೀ ಭಾನುವಾರ ಲಾಕ್ ಡೌನ್ ಹೇರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೆ ಸರ್ಕಾರಿ ಕಚೇರಿಗಳಿಗೆ ಭಾನುವಾರ ಮಾತ್ರವಲ್ಲದೆ, ಶನಿವಾರವೂ ರಜೆ ಘೋಷಣೆ ಮಾಡಲಾಗಿದೆ.

ರಾತ್ರಿ ಕರ್ಫ್ಯೂವನ್ನೂ ವಿಸ್ತರಣೆ ಮಾಡಲಾಗಿದ್ದು, 9 ಗಂಟೆ ಬದಲಾಗಿ ರಾತ್ರಿ 8 ಗಂಟೆಯಿಂದ ಕರ್ಫ್ಯೂ ಆರಂಭವಾಗಲಿದ್ದು, ಮುಂಜಾನೆ 5 ಗಂಟೆಯವರೆಗೆ ಮುಂದುವರಿಸಲಾಗುವುದು. ಕರ್ಫ್ಯೂ ಅವಧಿಯಲ್ಲಿ ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕರಾವಳಿಯಲ್ಲಿ ಕೊರೋನಾ ಜತೆಗೆ ಡೆಂಗ್ಯೂ ಭೀತಿ