ಕರಾವಳಿಯಲ್ಲಿ ಕೊರೋನಾ ಜತೆಗೆ ಡೆಂಗ್ಯೂ ಭೀತಿ

ಭಾನುವಾರ, 28 ಜೂನ್ 2020 (09:13 IST)
ಮಂಗಳೂರು: ಕೊರೋನಾ ಮಹಾಮಾರಿ ಈಗಾಗಲೇ ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ಅದರ ಜತೆಗೆ ಕರಾವಳಿಯಲ್ಲಿ ಈಗ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದೆ.


ದ.ಕನ್ನಡ ಜಿಲ್ಲೆ, ಕೇರಳದ ಕಾಸರಗೋಡಿನಲ್ಲಿ ಡೆಂಗ್ಯೂ ಜ್ವರದ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ಕೊರೋನಾದಂತೆಯೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವುದು ಹೊಸ ತಲೆನೋವು ತಂದೊಡ್ಡಿದೆ.

ಅಲ್ಪ ಸ್ವಲ್ಪ ಮಳೆಯಾಗಿರುವುದರಿಂದ ಸೊಳ್ಳೆಗಳಿಂದಾಗಿ ಈ ರೋಗ ಹರಡುತ್ತಿದೆ. ಹೀಗಾಗಿ ಕೊರೋನಾದಂತೆಯೇ ಡೆಂಗ್ಯೂ ಜ್ವರ ಪೀಡಿತರೂ ಆಸ್ಪತ್ರೆಗೆ ಅಲೆದಾಡುವಂತಾಗಿದೆ.  

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬೀತಾ? ಸಚಿವ ಹೇಳಿದ್ದೇನು?